ಕಾಯುತಿರುವೆ (Waiting)
ಕಾತುರದಿ ಕಾಯುತಲಿರುವೆ ನಿನ್ನ ಮಾತನಾಲಿಸಲು ಕೌತುಕದಿ ಕಾಯುತಿರ್ಪೆ ನಿನ್ನ ಸಂದೇಶಕೆ ಕೊನೆಯುಸಿರಿರುವರೆಗೂ ನಿನಗಾಗಿ ಕಾಯುತ್ತಲೇ ಇರುವೆ ಕಷ್ಟ ಸುಖ ದುಃಖಗಳ ನಡುವೆಯೂ ನೀ ನೆನಪಾಗುತಿರುವೆ ನಿನ್ನ ಅಂತರಾಳದ ಭಾವ ಅರಿಯದೇ ಒಂಟಿಯಾಗಿ ಕಾದು ಕುಳಿತಿರುವೆ ನಿನ್ನ ಮೌನವ ಭೇದಿಸುವ ಕ್ಷಣಕಾಗಿ ಕಾಯುತಿರುವೆ ನಿನ್ನೊಟ್ಟಿಗಿನ ಈ ಒಡನಾಟ ಹೀಗೇ ಇರಲೆಂಬ ಇಚ್ಛೆಯಲಿ ಕಾಯುತಿರುವೆ ನಗುವದನವ ಕಣ್ ತುಂಬಿಕೊಳ್ಳಲು ಕಾಯುತಿರುವೆ ನನ್ನೊಳಗಿನ ದುಗುಡವ ಹಂಚಿಕೊಳ್ಳಲು ಕಾಯುತಿರುವೆ ನನಗಾಗಿ ನೀ ನೀಡುವ ನಿನ್ನ ಆ ಸಮಯಕ್ಕಾಗಿ ಕಾಯುತಿರುವೆ ಹೇಳಲಿಚ್ಚಿಸುವ ಎಲ್ಲ ಕಥೆಗಳನು ಹೇಳಲು ಕಾಯುತಿರುವೆ..
Ad
Poetry Books 50% Off
Bestselling collections from top poets
Shop Now →
