ಪುಸ್ತಕ
ಸುಮ್ಮನೇ ಕರೆಯುವೆ ಮೆಲ್ಲ ಮೆಲ್ಲನೆ ಆಕರ್ಷಿಸುವೆ ನಿನ್ನೊಂದಿಗಿದ್ದ ಸಮಯವೆಲ್ಲ ಜಗವನ್ನೇ ಮರೆಸುವೆ ನೀ ನನಗೆ ಸ್ನೇಹಿತೆಯಾದದ್ದು ಆದರೂ ಎಂದು... ನಿನ್ನ ಬಿಟ್ಟಿರಲಾರದೆ ಇರುವಂತೆ ಮಾಡಿರುವೆ ನಿನ್ನೊಂದಿಗಿನ ಎಲ್ಲ ಕ್ಷಣಗಳು ನೆನಪುಗಳಾಗುವಂತೆ ಬದಲಾಯಿಸುವೆ ನೀ ಮೌನವಾಗಿಯೇ ನನ್ನೊಂದಿಗೆ ಮಾತನಾಡುವೆ ನನ್ನ ಎಲ್ಲ ಯೋಚನೆಗಳ ರುವಾರಿ ನೀನೇ ಆಗಿರುವೆ ನಿನ್ನ ಸ್ನೇಹ ನಿಜಕ್ಕೂ ಸಂತೋಷವನ್ನೆ ಕೊಟ್ಟಿಹುದು ಎನಗೆ
Ad
Poetry Books 50% Off
Bestselling collections from top poets
Shop Now →
