ಅದೇ ಬೇರು,ಹೊಸ ಚಿಗುರು
ಮುದುಡಿದ ಮಲ್ಲಿಗೆ ಮರಳಿ ಅರಳಿದೆ ನನಗಾಗಿ ಇನ್ನೆಂದೂ ಬಾಡದಿರಲಿ ನನಗಾಗಿ ತನು ಮನುಗಾಗಿ ಎಂದೆಂದೂ ನಗುವಿರಲಿ ನಿನ್ನ ಮೊಗದಲಿ ಓ ಚಿನ್ನ ನನ್ನ ಮನದಲಿ ಆರಾಧಿಸಿ ಪೂಜಿಸುತಿರುವೆ ನಾ ನಿನ್ನ ಮತ್ತೆ ಚಿಗುರೊಡೆದಿದೆ ವಿಧಿ ಚಿವುಟಿದ ಚೆಂದದ ಚಿಗುರು ನನ್ನ ಮನದ ಭಾವನೆಯ ಮಳೆ ಹನಿಯ ಸೋಕಿ ಹೊಸ ಚಿಗುರು ಹೊಸತನ ತರಲಿ ಬಿಡು ನಿ ಬೇಜಾರು ಎಂದೆಂದೂ ನಗಬೇಕು ನನಗಾಗಿ ನಿ ನೋವೆಲ್ಲ ದೂರ ನೂಕಿ ನಿದ್ರೆ ಕೇಡಿಸುವ ಕನಸುಗಳಲ್ಲಿ,ಒಂಟಿಯಾಗಿ ಕಳೆವ ನೋವುಗಳಲ್ಲಿ ಹಳೆ ನೆನಪು ನೆನಪಾಗೊ ಕ್ಷಣದಲ್ಲಿ,ಉಕ್ಕಿ ಬರುವ ದುಃಖದಲ್ಲಿ ನಿನ್ನ ಪ್ರತಿ ಹೆಜ್ಜೆಯಲ್ಲಿ,ನಾ ಇರುವೆ ನಿನ್ನ ಜೊತೆ ಜೊತೆಯಲ್ಲಿ ಈ ಜೀವ ಇರುವವರೆಗೂ ನಿನ್ನಲ್ಲಿ ನಾನಾಗಿ ಉಸಿರಾಗಿ ಉಸಿರಲ್ಲಿ ನನ್ನ ಎದೆಯಲಿ ನಿನಗೊಂದು ದೇಗುಲವ ಕಟ್ಟಿರುವೆ ಪ್ರತಿದಿನ ನಿನ್ನ ಪಾದಗಳಿಗೆ ಅಲ್ಲಿ ಪುರ್ಷ್ಪಾಚನೆ ಮಾಡುತಿರುವೆ ಓ ದೇವಿಯೇ ಶ್ರೀದೇವಿಯೇ ಈ ಅಂಬಿಯ ಪ್ರೇಮದೇವಿಯೇ ಪ್ರೇಮ ಪ್ರಸಾದ ನೀಡು ಈ ಜೀವ ಇರುವರೆಗೂ ಓ ಪ್ರಿಯೇ ✒️ಅಂಬುಶ್ರೀ
Poetry Books 50% Off
Bestselling collections from top poets
