ವೃಕ್ಷಮಾತೆ ಅಜರಾ"ಮರ"
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ಇವರು, ಚಿಕ್ಕರಂಗಯ್ಯ, ವಿಜಯಮ್ಮರ ಮುದ್ದುಮಗಳಾಗಿದ್ದರು, ಚಿಕ್ಕಯ್ಯನವರ ಪ್ರೀತಿಯ ಮಡದಿಯಾಗಿದ್ದರು, ದಾಂಪತ್ಯದ ನಂತರ ಮಕ್ಕಳಿಲ್ಲದ ಕೊರಗ ನಿಗಿಸಲು ಸಾವಿರಾರು ಗಿಡ ಬೆಳೆಸಲಾರಂಭಿಸಿದರು. ಸಂಸರಾದ ಭಾರವನ್ನು ಹೊತ್ತು, ಮೊದಲ ವರ್ಷವೇ ಇವರು ನೆಟ್ಟ ಆಲದಮರದ ಸಂಖ್ಯೆ ಹತ್ತು, ಎರಡನೇ ವರ್ಷ ಹದಿನೈದು, ಮೂರನೇ ವರ್ಷ ನೆಟ್ಟ ಸಸಿ ಇಪ್ಪತ್ತು, ನಾಲ್ಕು ಕಿಲೋಮೀಟರ್ ನಿಂದ ನೀರ ತರುತ್ತಿದ್ದೀರು ಬಿಂದಿಗೆಯ ಹೊತ್ತು. ಸಾವಿರಾರು ಗಿಡಮರಗಳನ್ನು ನೆಟ್ಟು, ಅವುಗಳ ರಕ್ಷಣೆಗೆ ಪಣವನ್ನು ತೊಟ್ಟು, ದಿನವೂ ಅವುಗಳಿಗೆ ನೀರುಣಿಸಿ, ಜಾನುವಾರಗಳ ಕಾಟವ ತಪ್ಪಿಸಿದಿರಿ ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ. ಅಂದು ನೀವು ನೆಟ್ಟು ಪೋಷಿಸಿದ ಆ ಗಿಡ ಮರ, ನೀಡುತ್ತಿರುವುದು ಜೀವಸಂಕುಲಕ್ಕೆ ಉಸಿರ, ಹಲವಾರು ಪ್ರಾಣಿ - ಪಕ್ಷಿ ಸಂಕುಲಕ್ಕೆ ಆಗಿಹವು ಆಧಾರ, ಇವರು ನೆಟ್ಟಿದ್ದು 385 ಆಲದಮರ, ಒಟ್ಟಾರೆ ಪೋಷಿಸಿದ ಗಿಡಗಳ ಸಂಖ್ಯೆ ಮೀರಿಹುದು ಎಂಟು ಸಾವಿರ. ಅಮ್ಮ ನಿಮ್ಮ ನೆನಪು ಎಂದಿಗೂ ಅಮರ. ನಿಮ್ಮ ಈ ಕಾರ್ಯ ಯುವಪೀಳಿಗೆಗೆ ಆದರ್ಶವಾಗಿದೆ, ಇದ ಕಂಡ ಸರ್ಕಾರ ನಿಮ್ಮನ್ನು ಗೌರವಿಸಿದೆ, ನಿಮ್ಮ ಆಶೀರ್ವಾದ ನಮಗೆ ಬೇಕಿದೆ, ನಿಮ್ಮ್ ಅಗಲಿಕೆಯ ನೆನಪಿಗೆ ನಾವೆಲ್ಲ ಒಂದೊಂದು ಗಿಡ ನೆಡಬೇಕಿದೆ.
Poetry Books 50% Off
Bestselling collections from top poets
