ಕಾಣದವರು
ಮನದೊಳಗಿಂದ ಇಣುಕಿದೆ ಹೊರಗೆ ಯಾರೂ ಕಾಣಲಿಲ್ಲ ಹೊರಗಿನಿಂದ ಇಣುಕಿದೆ ಮನದೊಳಗೆ ಯಾರೂ ಕಾಣಲಿಲ್ಲ, ಕಣ್ಣ ಮುಚ್ಚಿ ಹುಡುಕಿದೆ ಅಲ್ಲೂ ಯಾರೂ ಕಾಣಲಿಲ್ಲ ಕಣ್ಣ ತೆರೆದು ಹುಡುಕಿದೆ ಅಲ್ಲೂ ಯಾರೂ ಕಾಣಲಿಲ್ಲ, ಮನಸಲ್ಲೂ ಇಲ್ಲ ಕನಸಲ್ಲೂ ಇಲ್ಲ ಎಲ್ಲೂ ಸಿಗದವರು ವಾಟ್ಸಪ್ ಸ್ಟೇಟಸ್ನಲ್ಲಿ ಕಾಣದವರು ಕಂಡರು ನಗದವರು ಒತ್ತಾಯದ ನಗುವಿನೊಂದಿಗೆ ಕೇಕೇ ಹಾಕುತ್ತಿದ್ದರು. ನಿಶ್ಯಬ್ದ ಮನಸು ಪರಶುರಾಮ ಹೊಸಮನಿ
Ad
Poetry Books 50% Off
Bestselling collections from top poets
Shop Now →
