ಶಿವ
ನಾ ಕಂಡ ಶಿವ ನಂಬಿದವರ ಕೈಬಿಡದವ ಸುಡುಗಾಡಿನ ಸುರಸುಂದರಾಂಗ ಆ ನನ್ನ ಶಿವ ಕೊರಳಿನ ತುಂಬ ಬುರುಡೆಯ ಮಾಲೆ ಹೊಂದಿದವ ನನ್ನ ಪ್ರತಿಹೆಜ್ಜೆಯಲ್ಲೂ ಜೊತೆಯಲ್ಲಿ ನಿಲ್ಲುವವ ನನ್ನೊಳಗಿನ ಆತ್ಮ ಆ ನನ್ನ ಪರಮಾತ್ಮ ಭಕ್ತಿಯಲ್ಲಿ ಪೂಜಿಸಿದರೆ ಒಲಿವ ಮಹಾತ್ಮ ಕಲ್ಲು ಬಂಡೆಯಲಿ ಕಣ್ಣಿಗೆ ಕಾಣುವ ಪ್ರತಿಯೊಂದರಲೂ ಅವನದೇ ರೂಪ ತ್ರಿನೇತ್ರಧಾರಿ ಈ ಜಗದ ಸೂತ್ರಧಾರಿ ಜಗನ್ಮಾತೆಯ ಸಮೇತ ಧರೆಗಿಳಿಯುವ ಹರ ಕಾಂಚನಾ ಗಂಗೆಯ ನೆತ್ತಿಯ ಮೇಲೆ ಹೊತ್ತು ಸುತ್ತುವವ ಧ್ಯಾನದಲಿ ಸದಾ ಇರುವ ದಯಾಮಯಿ ನನ್ನ ಶಿವ ಭಕ್ತಿಯೊಂದಿದ್ದರೆ ಭೇದವ ಮಾಡದೇ ಒಲಿಯುವವ
Ad
Poetry Books 50% Off
Bestselling collections from top poets
Shop Now →
