ಸರಿಯಿಲ್ಲ ಸರ್ಕಾರ
ಸರಿಯಿಲ್ಲ ಸರಕಾರ ಅಂತಾನ ಸರಿ ಇರದ ಮತದಾರ ಸಾರಾಯಿ ನಶೆಗೆ ರೂಪಾಯಿ ಆಸೆಗೆ ಹಾಕಿ ಜೈ ಕಾರ ನಿಯತ್ತಿಲ್ಲದ ನಾಯಿಗೆ ಮತ್ತೆ ನಿ ಮತ ಒತ್ತಿ ಅವಸರ ಅಂತಿದೀಗ ಮತಿಗೇಡಿ ಮತದಾರ ಸರಿಯಿಲ್ಲ ಸರಕಾರ ಮತವನು ಮಾರಿಬಿಟ್ಟೆ ಮತಗಟ್ಟೆ ಹೋಗುವ ಮೊದಲ ಐದೊರ್ಷ ಐಷಾರಾಮಿ ಅಂತಾನ ಹೈನಾತಿ ಗೌಡ ಪಾಟೀಲ ಅವನೆ ಬರಲಿ ಇವನೆ ಬರಲಿ ಬರುವದಿಲ್ಲ ಇಲ್ಲಿ ಒಳ್ಳೆ ಕಾಲ ಸರ್ಕಾರ ಸರಿಯಿಲ್ಲ ಅನ್ನೊ ಮೊದಲ ನೀನಾಗಬೇಕ ಬದಲ ಗೆದ್ದವ ಸೋತವನ ಎಂಟೆಂಟು ಚೇಲಾ ಊರಲ್ಲಿ ಇವರ ಹಿಂಬಾಲ ತಿಳಿದಿಲ್ಲ ಯಾರಿಗೆ ಈ ಬೋಳಿ ಮಕ್ಕಳ ಹಡಬಿಟ್ಟಿ ಆಟದ ಜಾಲ ಹಣದ ಅಮಲು ಜಾತಿಯ ಜಾಲ ಇವರಾಡುವ ಆಟದ ಮೂಲ ಚುನಾವಣೆ ಬಂದಾಗ ಯೋಚನೆ ಮಾಡಿ ಮತ ಚಲಾವಣೆ ಕೇಳ ✒️ಎ ಎಸ್ ಬೆಳ್ಳೆಗನೂರ
Ad
Poetry Books 50% Off
Bestselling collections from top poets
Shop Now →
