ಕೆ.......
ಬದುಕಿನ ಬವಣೆಗೆ ಪ್ರೀತಿಯ ಹೊದಿಕೆ ನಿನ್ನ ಸ್ನೇಹದ ಒಲವಿಗೆ ನಗುವಿನ ಬೆರಕೆ ಬಡಪಾಯಿಯ ಪಾಲಿಗೆ ಬಂಗಾರದ ಕುಡಿಕೆ ಜನರ ದೃಷ್ಟಿಗೆ ಮನೆ ಮೂಲೆಯ ಪೊರಕೆ ಆಯಾಸದ ಜೀವಕೆ ಬೇಕೊಂದು ಗೊರಕೆ ತುತ್ತಿನ ಜೀಲವ ತುಂಬಿಸುವ ಮಡಿಕೆ ಪ್ರತಿದಿನವೂ ನಿನ್ನ ನೆನಪಿನ ಚಡಪಡಿಕೆ ಕೊನೆಯ ಪದಗಳೆಲ್ಲವೂ ಕೆ...ಕೆ...ಕೆ.. ನನಗೇ ತಿಳಿದಿರಲಿಲ್ಲ ನನ್ನ ಈ ಬರೆಯುವಿಕೆ......
Ad
Poetry Books 50% Off
Bestselling collections from top poets
Shop Now →
