ಜಾತಿಗಳೋ? ಮನಸ್ಸಿನ ಚಿತೆಗಳೋ?
ಜಾತಿಗಳು ಇನ್ನು ಮಾತನಾಡುತ್ತಿವೆ ಕಾನೂನುಗಳ ಕತ್ತು ಹಿಸುಕಿ ಕುತ್ತಿಗೆ ಮೇಲಿನ ನೆತ್ತಿ ಹಿಡಿದು. ಪ್ರತಿಭಟನೆಯ ಧ್ವನಿಯ ಹೊರಡುತ್ತಲೇ ಹೊಸಕಿ ಹಾಕಿ ಕತ್ತು ಹಿಸುಕಿ ತುಳಿದರೋ. ಮೀಸಲಾತಿಯೊಳಗು ಮೂಗು ತೂರುಸಿ ಹೂ ಗುಟ್ಟುವ ಗುಲಾಮರಿಗೆ ಅಧಿಕಾರ ಕೊಡಿಸಿ ತಮ್ಮೊಳಗೆ ತಂದು ಇಟ್ಟರು. ಮಡಿವಂತಿಕೆ ಹೆಸರನ್ನಿಟ್ಟು ದೈವದ ಬೆದರಿಕೆಕೊಟ್ಟು ಅಸ್ಪೃಶ್ಯತೆಯ ಸೇತುವೆಯ ಕಟ್ಟಿದರು. ಅಧಿಕಾರದ ಆಸೆಗಾಗಿ ಜಾತಿ ವೇಷ ತೊಟ್ಟು ನರಿಯ ಬುದ್ಧಿ ಬಳಸಿ ಮುರಿದು ತಿಂದು ನೆತ್ತರವ ಪರರಿಗಂಟಿಸಿದರು. ಜ್ಞಾನವಂತರೇ ಜಾತಿವಾದಿಗಳಾದರೆ ಸಮ ಸಮಾಜದ ಕನಸು ಮರಳಿನ ಮನೆಯು, ಇಬ್ಬನಿಯ ಹನಿಯು. ಜಾತಿಯ ಬೆಳೆಸುವ ಜಾತಿಯ ಉಳಿಸುವ ಮನಸುಗಳು ಕೊಳೆಯಲಿ ಸರ್ವ ಜನಾಂಗದ ತೋಟದ ಹೂಗಳಿಗೆ ಮೇಲು ಗೊಬ್ಬರವಾಗಲಿ. ರಚನೆ. # ಶಿವಣ್ಣ ಶಿಕ್ಷಕರು ಗಾಣಗಟ್ಟೆ.
Ad
Poetry Books 50% Off
Bestselling collections from top poets
Shop Now →
