ಗಾಜಿನ ಕವನ
ನಿನ್ನ ಖುಷಿಲೀ ನನಗೆ ಪಾಲಿಲ್ಲದಿದ್ದರೂ ನಿನ್ನ ದುಃಖವನು ಹಂಚಿಕೋ ಸದಾ ನಾ ಇರುವೆ.... ನೀ ದೂರವಾದರೂ ನಾ ಬದುಕಬಲ್ಲೆ ಆದರೆ ನೀ ಮರೆಯಾದರೆ ನಾ ಹೇಗೆ ಇರಲಿ. ನಿನ್ನ ನೆನಪೇನೋ ಕಾಡುತಿದೆ ದಿನ ನಿನ್ನ ಹೆಸರನೇ ಪಟಿಸುತಿದೆ ಮನ ಜಂಗಮವಾಣಿಯ ಮುಖಪುಟ ನಿನ್ನ ವದನ ನಾ ಗೀಚುತ್ತಲೇ ಇರುವೆ ಗಾಜಿನ ಕವನ.... ನಿನ್ನ ಹುಡುಕಾಟದಲಿರುವೆ ಬೇರೊಬ್ಬರ ರೂಪದಲಿ ನಿನ್ನದೇ ಜಂಜಾಟದಲಿ ಇರುವೆ ನೆಮ್ಮದಿಯೇ ಇಲ್ಲದ ಜಗದಲಿ
Ad
Poetry Books 50% Off
Bestselling collections from top poets
Shop Now →
