ಅಜ್ಜಿಯ ಮನೆ
ಅಮ್ಮನ ಪ್ರೀತಿಯ ಅಪ್ಪುಗೆಯ ಬಿಟ್ಟು ಬರಲು ಅವಳಿಗೂ ಮನಸಿಲ್ಲ ಅಜ್ಜಿಯ ಅಕ್ಕರೆಯ ಕೈತುತ್ತ ಬಿಟ್ಟು ಬರಲು ಅವಳಿಗೂ ಇಷ್ಟವಿಲ್ಲ ಭವಿಷ್ಯತ್ತಿನ ಕಡೆ ಗಮನವ ತೋರಲು ಈ ಕ್ಷಣದ ಸಂತೋಷವಾ ತೊರೆಯುತಿಹಳು ಅವಳ ಮನಸ್ಥಿತಿ ಅರ್ಥ ವಾಗುತ್ತಿಲ್ಲ ಯಾರಿಗೂ... ಅವಳ ಪರಿಸ್ಥಿತಿ ಅರಿವು ಬೇಕಿಲ್ಲ ಯಾರಿಗೂ.... ಅವಳಿಗೂ ಗೊತ್ತು ಕಳೆದ ಹೊತ್ತಿನ ಖುಷಿ ನೆನಪುಗಳ ಮೂಟೆಕಟ್ಟುತ್ತಿಹಳು ಅಜ್ಜಿಯ ಮನೆಯಲಿ ಅವರದೂ ಮರುಕ ಮತ್ತೆ ಎಂದು ಬರುವಳೋ ಎಂದು ಪ್ರೀತಿ ಹೆಚ್ಚಾದಾಗಲೇ ಕೋಪವೂ , ಆ ಕೋಪದೊಂದಿಗೆ ಬೈಗುಳವು ಬರುವುದು.....
Ad
Poetry Books 50% Off
Bestselling collections from top poets
Shop Now →
