ದ್ವಾಪರಯುಗಾಂತ್ಯದ ಕಲಿಯುಗದ ದೇವ ಮಾನವ
ನಾಡಗೌಡ ಹುಟ್ಟಿದ್ದು ಶಿವನು ಪೂಜಿಸುವ ಲಿಂಗದಲ್ಲಿ ಪರಮಾತ್ಮನ ಸೇವೆ ಮಾಡುತಿದ್ದ ಗುರುವಿನ ಚಿತ್ತದಲ್ಲಿ ಅಡಕೆಶ್ವರ ಋಷಿ ರೂಪದಲ್ಲಿ ಶಿವ-ಪಾರ್ವತಿ ಭೂಮಿಗೆ ಕಳಿಸ್ಯಾರ ದ್ವಾಪರಯುಗ ಅಂತ್ಯದ ಕಲಿಯುಗದ ಆರಂಭದಲ್ಲಿ ದೇವಲೋಕದ ಸಮಕ್ಷೇಮದಲ್ಲಿ ಭೂಲೋಕಕ್ಕೆ ಬಂದನೋ ದೇವ ಮಾನವ ಸೋಮಲಿಂಗ ಆಗಿದ್ದ ನಿನ್ನ ಗುರುವ ಕೇಳಿದ್ದು ಕೊಡುತಿದ್ದ ವರವ ಯಾರಿಗೂ ಮಾಡುತಿದ್ದಿಲ್ಲ ಭೇದ-ಭಾವ ಕಲಿಯುಗದಲ್ಲಿ ನಡೆದೈತಿ ಗುರುಶಿಷ್ಯರ ಒಡೆತನ ಅಮೋಘ ಸಿದ್ದಗ ತಪ್ಪಲಿಲ್ಲ ಶಿವನ ಕಾಟ ಕಡೆತನ ಬ್ರಹ್ಮಚರ್ಯ ಸಾಕು ಸಂಸಾರ ಆರಂಭ ಮಾಡು ಅಂತ ಹೇಳಿ ಹೋದ ಮಾತನ್ನ ಆ ಊರ ಪಾಟೀಲನ ಮಗಳು ಇದ್ದಳು ಪದ್ಮಾವತಿ ಬೆತ್ತದ ಜೊತೆ ಮದುವೆ ಆಗೈತಿ ಆಗ್ಯಾಳ ನೋಡರಿ ಅಮೋಘ ಸಿದ್ದನ ಸತಿ ಶಿವನ ವರದಿಂದ ಜನಿಸಹರು ಮಹಾಸಿದ್ದ, ಅವದೂತ ಸಿದ್ದ, ಬಿಳಿಯಾನ ಸಿದ್ದ ಇವರ ಮನಸ್ಸು ಇತ್ತು ಬಹಳ ಶುದ್ಧ ಅಮೋಘ ಸಿದ್ದನ ಮಾತಿಗೆ ಮಕ್ಕಳು ತಂದೆ ಮಾತಿಗೆ ಯಾವಾಗಲು ಸಿದ್ದ ಒಡೆಯರೇ ಬಹಳ ಐತಿ ನಿಮ್ಮ ಕಥೆಸಾರ ನಾನಲ್ಲ ದೊಡ್ಡ ಬರಹಗಾರ ತಿಳಿದಷ್ಟು ಬರೆದಿರುವೆ ದೇವರೇ ನಿಮ್ಮನ್ನ ನೆನಸಿ ಹಣೆಗೆ ಹಚ್ಚಿ ಭಂಡಾರ
Poetry Books 50% Off
Bestselling collections from top poets
