ಸು
ನಿನ್ನ ನೋಡಬೇಕೆಂಬ ಕನಸು ನಿನ್ನ ಮೇಲೆ ನನಗಿಂದು ಮುನಿಸು ನಿನ್ನ ಪ್ರೀತಿಸಿದ ಕಾರಣಕೆ ಕ್ಷಮಿಸು ನಿನ್ನದೇ ಗುಂಗಿನಲ್ಲಿ ನನ್ನನ್ನಿರಿಸು ಒಮ್ಮೆಯಾದರೂ ಸಂದೇಶ ಕಳಿಸು ಕಣ್ಣಿನ ನೋಟದಲಿ ಪ್ರೀತಿಯ ತಿಳಿಸು ಬೇಗ ನನ್ನ ಈ ಮೋಹವ ಇಳಿಸು ನನ್ನ ಹೆಸರನ್ನೊಮ್ಮೆಯಾದರೂ ಕನವರಿಸು ನಿನ್ನ ಉಸಿರಲಿ ನನ್ನುಸಿರ ಬೆರೆಸು ನನ್ನ ಭಾವನೆ ಅರ್ಥವಾಗಿದ್ದಲ್ಲಿ ನನ್ನ ಮೋಹಿಸು ನಿನ್ನ ಕೋಪದಲ್ಲಿ ನನ್ನ ನೋಯಿಸು ನಿನ್ನ ಬಂಧನದಿಂದ ನನ್ನ ವಿಮುಕ್ತಿ ಗೊಳಿಸು
Ad
Poetry Books 50% Off
Bestselling collections from top poets
Shop Now →
