ಗೆಳತಿ
ಅಂದುಕೊಂಡಿರಲಿಲ್ಲ ನನಗೂ ಹೀಗೆ ಆಗುವುದೆಂದು ನೀ ಇರದ ಇಂದು ನನಗೇಕೊ ನೂರು ದಿನಗಳೆಂಬ ಭಾವನೆ ನಿನ್ನ ನೋಡದ ಕಣ್ಣು ನಿನ್ನನ್ನೇ ಹುಡುಕುತಿಹುದು ನೀ ಇರದ ಜಾಗವನ್ನೇ ನೀ ಬರುವ ಹಾದಿಗೇ ಕಾಯುತ್ತಿರುವೆ ಗೆಳತಿ ನಿನ್ನ ನಗು ಮೊಗವ ಕಾಣಲು ಕಾದು ಕುಳಿತಿರುವೆ ಗೆಳತಿ ನಿನ್ನಿಲ್ಲದ ಈ ದಿನ ಕಳೆಯುತ್ತಲೇ ಇಲ್ಲ... ಹಚ್ಚಿಕೊಂಡಿರುವೆ ಹೆಚ್ಚು ಕ್ಷೇಮವಾಗಿರು, ನೆನಪಾಗುವೆ ಎಂದು ನಾ ಹೇಳಲಾರೆ ಕಾರಣ ನಾ ಮರೆತೇ ಇಲ್ಲ ನಿನ್ನ ಚಿತ್ರಪಟವ ಅದೆಷ್ಟು ಬಾರೀ ನೋಡಿಹೆನೋ ಲೆಕ್ಕವಿಲ್ಲದಷ್ಟು....
Ad
Poetry Books 50% Off
Bestselling collections from top poets
Shop Now →
