ಹಣ
೨೫ ಹಣ ಹಣವಾಗಿರಲಿ ಸಾಧನ ಅದೇ ಆಗದಿರಲಿ ಗಮ್ಯಧನ ಹಣವೆಂದರೆ ಹೆಣವು ಕುಣಿಯುವುದೆಂದು ಹೇಳುವರು ಹಣದಿಂದ ಬಹಳಷ್ಟು ಸಾಧ್ಯವಿಲ್ಲ ಎಂದು ಕರೋನದಿಂದ ಕಲಿತಿರುವೆವು! ಹಣ ಅಂಕಿತದಲ್ಲಿದ್ದರೆ ಆಗುವುದು ಸಾಧನೆ ಅಗಾಧ ಹಣವೇ ನಮ್ಮನ್ನು ನಿಯಂತ್ರಿಸಿದರೆ ಆಗುವುದು ಪ್ರಮಾದ! ಹಣವನ್ನು ಕುಣಿಯಲು ಬಿಟ್ಟರೆ ಜೀವನ ಆಗುವುದು ದುಸ್ತರ ಸಾಧನೆಯ ಹಾದಿಯಲ್ಲಿ ಹಣವಾಗಲಿ ಎಂದಿಗೂ ಮಾರ್ಗ ಅದಾಗದಿರಲಿ ಎಂದಿಗೂ ಗಮ್ಯ ! ಬದುಕಿನ ಉದ್ದಕ್ಕೂ ಇರಲಿ ಹಣದ ಅನುರಣನ ಆದರೆ ಆಗದಿರಲಿ ಜೀವನವೇ ಹಣದ ಅಂಕಣ ! ಬೇಕು ಹಣವು ಸಕಲ ಸೌಲಭ್ಯಗಳಿಗೆ ಆದರೆ ಆಗದಿರಲಿ ಅದರ ವೈಭೋಗದ ಸಾದರ! ಹಣವಾಗಲಿ ಶಿಕ್ಷಣದ ಸಾಧನ ಆದರೆ ಆಗದಿರಲಿ ಶಿಕ್ಷಣದ ಅಂತಿಮ ಪಯಣ ! ಹಣವಾಗಲಿ ಆರೋಗ್ಯದ ರಕ್ಷಕ ಆದರೆ ಆಗದಿರಲಿ ಆರೋಗ್ಯ ವಿನಾಶಕ ! ಹಣವಾಗಲಿ ಸಂಬಂಧ ಬೆಸೆಯುವ ಸೇತುವೆ ಆದರೆ ಆಗದಿರಲಿ ಸಂಬಂಧ ವಿಭಾಜಕ ! ಹಣವಾಗಲಿ ಐಶ್ವರ್ಯದ ಪ್ರತೀಕ ಆದರೆ ಆಗದಿರಲಿ ಅಹಂಕಾರದ ಪ್ರತಿಕ ! ಹಣವಾಗಲಿ ಸ್ನೇಹದ ಸಂಕೋಲೆ ಆದರೆ ಆಗದಿರಲಿ ಸ್ನೇಹದ ವಿನಾಶಕ ! ಹಣವಾಗಲಿ ಪರಿಸರ ರಕ್ಷಕ ಆದರೆ ಆಗದಿರಲಿ ಪರಿಸರ ಭಂಜಕ! ಹಣವಾಗಲಿ ಮಾನವ ರಕ್ಷಕ ಆದರೆ ಆಗದಿರಲಿ ಮಾನವ ವಿನಾಶಕ ! -ಶಹಾಬುದ್ದೀನ್ ,( ಕಾಶ)
Poetry Books 50% Off
Bestselling collections from top poets
