ಮುಗುಳುನಗೆ
ನಿನ್ನ ನೋಡುತ್ತಲೇ ನಿಲ್ಲುವಾಸೆ ನನಗೆ ಸುಮ್ಮನೆ ನೀ ನಡೆಯುತ್ತಿರು ಮೆಲ್ಲಗೆ ನಾ ಮೆಚ್ಚಿದ್ದು ನಿನ್ನಲ್ಲಿ ಆ ನಿನ್ನ ಮುಗುಳುನಗೆ ಸುವಾಸನೆಯ ಬೀರುತಿಹುದು ನೀ ಮುಡಿದ ಮಲ್ಲಿಗೆ ನಿನ್ನ ಕೋಪಕ್ಕೆ ಮೂಗಿನ ತುದಿ ಸ್ವಲ್ಪ ಕೆಂಪಗೆ ಹೇಳದೇ ಸದಾ ಬರುವೆ ನನ್ನ ಕನಸ್ಸಿಗೆ ಏನೋ ಆಗಿಹುದು ನಿನ್ನ ನೋಡಿ ನನ್ನ ಮನಸ್ಸಿಗೆ ಬರೆದಿಡಲು ಮುಗಿಯದ ಈ ಹೊತ್ತಿಗೆ ದಿನವಿಡೀ ನಾ ಕಾಯುವುದು ನಿನ್ನ ಬರುವಿಕೆಗೆ ಬಳಿ ಬಂದೊಡನೆ ಸೋಲುವುದು ನಿನ್ನ ಸೌಂದರ್ಯಕೆ ಮೂಗುತ್ತಿ ಬಲು ಚೆಂದ ನಿನಗೆ ಸ್ಥಬ್ದನಾಗಿಹೆ ನಾ ಆ ನಿನ್ನ ಸ್ನೇಹಕೆ
Ad
Poetry Books 50% Off
Bestselling collections from top poets
Shop Now →
