ನೆನಪು
ನೀ ನೀಡಿದ ಹಳೆ ನೆನಪೆಲ್ಲವು ಶರ ಸರದಿಗೆ ನನ ಬಲಿ ನೀಡಿವೆ ಕಣ್ಣಂಚಿನ ಹನಿಯೊಂದು ಮಳೆ ನೀರಲಿ ಬೆರೆತಾಗಿದೆ ಒಲವೆಲ್ಲವು ಈ ಜೀವಕೆ ಅರಿವಾಗದೆ ನೋವಲ್ಲಿಯೇ ಮರೆಯಾಗುತಿದೆ ..!! ಕಣ್ಣಂಚಿನ ಹುಸಿ ನೊಟವು ಕನಸೆಲ್ಲವ ಕೊಲ್ಲುತಿದೆ ಕಣ್ಣಿರಲೆ ಬದುಕೆಲ್ಲವು ಮುಳುಗುತಿದೆ ನೀ ಜೊತೆಗಿದ್ದ ಕ್ಷಣವೆಲ್ಲ ಎದುರಾಗಿ ನನ ಹೃದಯವ ನೊಯಿಸುತಿವೆ ನಿನ್ನ ಸನಿಹವು ದೂರಗಿ ಎದೆ ಬಡಿತವು ಲಯ ತಪ್ಪುತಿದೆ ಮಳೆಗಾಲದ ಮುಸ್ಸಂಜೆಗೂ ನೊವಾಗಿ ಕಣ್ಣೀರ ಹರಿಸುತಿದೆ ನಿನ್ನ ನೆನಪು ಅಳಿಸದೆ ಸಿಡಿಲಲ್ಲೆ ಕಿರುಚಾಡಿದೆ ಈ ಜೀವವು ಮಸಣದಹಾದಿಯಲಿ ಒಬ್ಬಂಟಿಯಾಗಿ ನಡೆದೆದಿ ನಿನ್ನ ಪ್ರೀತಿಗೆ ಪ್ರತಿಯಾಗಿ ಕಣ್ಣೀರ ಬಡ್ಡಿಯ ತೆರುತಿದೆ ನೀ ನೀಡಿದ ಹಳೆ ನೆನಪೆಲ್ಲವು ಶರ ಸರದಿಗೆ ನನ ಬಲಿ ನೀಡಿವೆ ಕಣ್ಣಂಚಿನ ಹನಿಯೊಂದು ಮಳೆ ನೀರಲಿ ಬೆರೆತಾಗಿದೆ ಒಲವೆಲ್ಲವು ಈ ಜೀವಕೆ ಅರಿವಾಗದೆ ನೋವಲ್ಲಿಯೇ ಮರೆಯಾಗುತಿದೆ -ಕಾವ್ಯಪ್ರೀಯ
Ad
Poetry Books 50% Off
Bestselling collections from top poets
Shop Now →
