.✍🏼
ಇದ್ದೆ ಹಾಗೆ ಸುಮ್ಮನೆ.. ಏನೂ ಹೇಳಲಿಲ್ಲ.. ಏನನ್ನು ಕೇಳಲಿಲ್ಲ.. ಆದರೂ ಏನೋ ಆಗಿದೆ ಈಗ ಒಂಥರಾ ಆದರೆ ಅವನಾರೋ ಗೊತ್ತಿಲ್ಲ.. ಸುಮ್ಮ ಸುಮ್ಮನೆ ಒಲವ ತೋರುವ.. ಕಾಳಜಿ ವಹಿಸುತ ಬರುವ . ನಾಯೇನ ಅವನಲಿ ಬಯಸದೇ.. ಸುಖಾಸುಮ್ಮನೆ ನನ ಖಾಸಗಿ ಖಾಲಿ ಹೃದಯವ ಬಡಿದೆಬ್ಬಿಸುವ ಪರಿ ನೋಡಿ.. ಕರಗಿದೆ ಮನ ಮಂಜಿನಂತಯೇ.. . . . . . . ನಡು ನಡುವೆ ಪಿಸು ಪಿಸು ಮಾತುಗಳು ಅವನ ಕೂಗು ಕೆಲವು ಕ್ಷಣ.. ತಿರುಗಿ ನೋಡುವ ನಾನು.. ನನ್ನ ನೋಡಬಯಸುವ ಅವನ ಕಣ್ಗಳು.. ನೆಪ ಮಾತ್ರ ಕೆಲ ವಿಷಯಗಳು... ಮತ್ತೆ ಯಾಕೋ ಘಾಸಿಯಾದಂತಿದೆ ಮನ.. ಮತ್ತೆ ಕಾಯುತಿರುವೆ ಒಮ್ಮೆ ನಿಟ್ಟುಸಿರ ಬಿಟ್ಟು.. ನನ್ನ ಮನದ "ಸೈನಿಕ"ನೀ.. ನಗು ಬರುತಲಿಹುದು.. ಈಗೀಗ
Ad
Poetry Books 50% Off
Bestselling collections from top poets
Shop Now →
