ಕಾಡಿದ ಘಳಿಗೆ
ಮಿಣುಕದೇ ನೆಟ್ಟ ವಿವರ್ಣ ಕಣ್ಣೋಟ ಮನದ ಭಾರವೇ ಮೊಗದ ಭಾಷಾಂತರ! ಅತೀವ ಕೊರಗು ದುಗುಡ ದುಮ್ಮಾನಗಳಿಗೆ ಆಂತರ್ಯದಲೇ ಕರೆಕೊಟ್ಟು ಜಂಘಾಬಲವನ್ನೇ ಹುದುಗಿಸಿದಾಗ ಸೂಫಿಯ ಕಥೆಗಳೂ ಭಾರವೆನಿಸುತ್ತವೆ ಆ ವೇಳೆಗೆ ದೂರ ದಡಕ್ಕೆ ಸೇರುವ ಅಲೆ ಮೊದಲಿನ ಹಾಗೆ ಮತ್ತೆಂದೂ ಬಾರದು ತತ್ತರಿಸಿದ ಬದುಕು ಸುತ್ತ ಬಿದ್ದಿರುವ ಒಣಗಿದೆಲೆಗಳ ರಾಶಿ ಬೀಸಿದಂತೆ ಬಿಗುವಾಗುವ ಈ ದೇಹಕ್ಕೆ ಸಿಹಿಗಾಳಿಯೂ ಮೈ ಚುಚ್ಚುವ ಮುಳ್ಳನ್ನೇ ಜಿನುಗಿಸುತ್ತಿದೆ ಮಂಜಾದ ನಿಶ್ಯಬ್ಧ ಮನದ ನಂಜನ್ನು ಹೊರಬಿಚ್ಚುತ್ತಿದೆ ಮೈ ಮಡಚಿ ಕೂತ ಕೂಡಲೇ ಬಿಟ್ಟ ಕಣ್ಣುಗಳೂ ಬಿಟ್ಟಂತೆಯೇ ಇವೆ ಗಕ್ಕನೆ ಬಂದು ಎತ್ತೊಯ್ಯುವ ಯಾವ ಆಕಾಂಕ್ಷೆಗಳೂ ಬಾರದ ಹೊತ್ತಿಗೆ ಬದುಕ ಶಿರಸ್ಸು ಶೂನ್ಯಕ್ಕೆ ಹಚ್ಚಿದ ಪ್ರತಿಮೆಯಾಗಿದೆ ಇಲ್ಲಿ ರವಿಯೂ ನಿರ್ದಯಿ ಆಗಿರುವಾಗ! - ಕೆ.ಜೆ.ಕೊಟ್ರಗೌಡ ತೂಲಹಳ್ಳಿ
Ad
Poetry Books 50% Off
Bestselling collections from top poets
Shop Now →
