ನಿರಂತರತೆ
ಮುಂದೇನೂ.... ಆಗದು ಹರಿವಿನ ನಿರಂತರತೆಯಿರಲಿ ಸಾಕು. ವಿಧಿಯಾಟವೇನೂ....ಇಲ್ಲ ಸಮಯದಾಟದಲ್ಲಿ ಮುಳ್ಳುಗಳ ಜಗಳವಷ್ಟೇ.., ಸಾಗುವ ದಾರಿ ಯಾವುದೇ ಇರಲಿ ಸಾರಿಸಿಕೊಂಡು ನಡೆಯಬೇಕಷ್ಟೆ. ಸಾವಿನ ಚಿಂತೆಯೇಕೆ... ಅದು ಅದು ದಿನಗಳನ್ನ ಎಣಿಸುವ ಲೆಕ್ಕವಷ್ಟೆ.., ಬಂಧಗಳ ಬಗ್ಗೆ ಕಾಳಜಿಯಿರಲಿ ಸಂಬಂಧಗಳ ಬಗ್ಗೆ ಜಾಗರೂಕನಾಗಿರು ಸಾಕು. ಸಂವತ್ಸರಗಳೇ ಹಾಗೆ ಉರುಳುವ ದಾಳಗಳಂತೆ ಸುಮ್ಮನೇ ನಡೆಯುತ್ತಿರು ನೀ ನಿನ್ನಂತೆ ನೀ ಎಂದೂ ನಿನ್ನಂತೆ.... -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
