ಮುಗ್ಧ ಮನಸ್ಸು
ಅವಳ ಒಂದು ನೋಟಕಾಗಿ ದಿನವಿಡೀ ಕಾಲೇಜಿನಾಚೆ ಕಾದಿದ್ದು ನಿಜ ಅವಳ ಒಂದು ಮಾತಿಗಾಗಿ ಪರಿತಪಿಸುತ್ತಿದ್ದವ ನಾ ಅವಳನ್ನೇ ನೋಡುತ್ತಾ ಪ್ರತಿಕ್ಷಣ ಕಳೆದವ ನಾ ಅವಳ ಬಳಿ ನಿಂತಾಗ ಎದೆ ಬಡಿತ ಜೋರಾದದ್ದು ಸತ್ಯ ಅವಳ ಮೊದಲಪ್ಪುಗೆಯ ಸ್ಪರ್ಶ ಇಂದಿಗೂ ನೆನಪಿದೆ ಅವಳಿಂದ ಪಡೆದ ಮೊದಲ ಚುಂಬನವ ಮರೆತಿರುವೆ ಎಂಬುದು ನೆಪ ಮಾತ್ರ ಅವಳ ಮೌನ ನನ್ನ ಮನದ ನೆಮ್ಮದಿಯನ್ನೇ ಕೆಡಿಸಿದ್ದು ಕರೆ ಅವಳ ಪ್ರತಿಯೊಂದು ಭಾವನೆಗಳಲ್ಲಿ ಜೀವಿಸಿದ್ದವ ನಾ ಅವಳ ಸೌಂದರ್ಯವನ್ನು ಬಣ್ಣಿಸುವ ಕಲೆ ತಿಳಿದಿಲ್ಲ ನನಗೆ ಅವಳ ಮುಗ್ಧ ಮನಸ್ಸು ನನ್ನ ಮನವ ಆವರಿಸಿತು.
Ad
Poetry Books 50% Off
Bestselling collections from top poets
Shop Now →
