ಎಲ್ಲೆಡೆಯೂ ಮೊದಲಾಗು..!
ಏನಾದರೂ ಗಳಿಸಬೇಕೆಂದು ಬಂದವನು ನೀನು ಏನೂ ಮಾಡದೆ ಸುಮ್ಮನೆ ಏಕೆ ಕುಳಿತೆ..? ಕಾಲಚಕ್ರ ತಿರುಗುವುದನು ನಿಲ್ಲದು ನಿನಗಾಗಿ ಎಂದು ವಿಧಿ ಹಿಂದಕೆ ಸರಿಯದು ನಿನ್ನ ನೋಡಿ ಹಿಮ್ಮೆಟ್ಟುವೆ ಅದನು ನೀನು ಎಂದು ಕುಳಿತುಕೊಳ್ಳದೆ ನಡೆಯುತಿರು ನೀನು ನಿಲ್ಲುವೆ ನೀನು ಎಲ್ಲರಿಗಿಂತಲೂ ಮುಂದೆ ಎಲ್ಲವನು ಜಯಿಸುವೆ ಎಂದು ಬಂದವನು ಎಲ್ಲರಲಿ ಒಬ್ಬನಾಗಿಯೇ ಏಕೆ ನಿಂತೆ...? ಕಾಡ್ಗಿಚ್ಚು ಹೊತ್ತಿಸು ನಿನ್ನೊಳಗೆ ಒಮ್ಮೆ ನಂದಿಸಲು ಸಾಧ್ಯವಾಗದಂತೆ ಅದು ಉರಿದುರಿದು ತಣಿದು ಬೂದಿಯಾಗಿ ತನ್ನಾಟ ನಿಲ್ಲಿಸುವವರೆಗೂ ನಿಂತಲ್ಲಿಯೇ ನಿಲ್ಲದೆ ಓಡುತಿರು ನೀನು ಗುರಿ ಮುಟ್ಟುವೆ ಎಲ್ಲರಿಗಿಂತಲೂ ಏನಾದರೂ ಸೇರಬೇಕು ಎಂದು ಬಂದವನು ಎಲ್ಲಿಯೂ ಹರಿಯದೆ ಏಕೆ ಮೌನವಾದೆ...? ಪರ್ವತದ ಎತ್ತರಕೆ ಸಮನಾಗಿರಲಿ ನಿನ್ನ ಆತ್ಮವಿಶ್ವಾಸದ ಆಶಾಭಾವ ಕಡಲ ತೊರೆಗಳಂತೆ ಬೋರ್ಗರೆಯಲಿ ಜೀವನೋತ್ಸಾಹದ ಚಿಲುಮೆ ಹರಿ ಹರಿದು ನುಗ್ಗು ರಭಸದಿ ನೀನು ಜಲಧಾರೆಯಾಗಿ ಕಂಗೊಳಿಸುವೆ ಎಲ್ಲೆಡೆಯೂ - ನಿರಂಜನ
Poetry Books 50% Off
Bestselling collections from top poets
