ದಾಸವಾಳ
"ಶೂದ್ರ ನೆಟ್ಟ ಗಿಡಕೆ ಬೇದವಿಲ್ಲದ ನೀರೆರೆದು ಬಿಟ್ಟ ಹೋವ ನೋಡುತ ತನ್ನದೆಂದ ದೇವರಾರೋ.? ಹೂವಿಗಿಲ್ಲದ ಜಾತಿ ನೀರಿಗಿಲ್ಲ ಧರ್ಮ ಕಟ್ಟಿದಾ ಗುಡಿಯೊಳಗೆ ಕೂರಲು ಜಾತಿ ಇಟ್ಟವರಾರೋ? ಕಾಲ ಬುಡದ ಕಲ್ಲ ತಂದವನು ಅವನು ಕೆತ್ತಿ ದೇವರ ಮಾಡಿದವನು ಇವನು ಗರ್ಭದೊಳಗಿಟ್ಟು ಗಂಟೆ ಬಾರಿಸಿ ದೂರದಿಂದಲೇ ತೀರ್ತ ಬಿಟ್ಟವನಾರೋ? ಗಿಡದ ಹೂ ಕೊಳೆತು ಗೊಬ್ಬರವಾದೀತು ಬಿಟ್ಟ ನೀರು ಮತ್ತೆ ಒಡಲ ಸೇರೀತು ಕಲ್ಲು ಒಡೆದೊಡನೆ ಮುಕ್ಕಾದಿ ಹೋದೀತು ನೀ ಮುಕ್ಕಾದರೆ ಮೂಗ ಮುಚ್ಚುವವರೋ.. ಜಾತಿಯೊಳಗೊಂದು ನೀತಿ ಇರಬೇಕು ಆ ನೀತಿ ನಾವೆಲ್ಲ ಒಂದೇ ಆಗಿರಬೇಕು ನೀ ಯಾಕೆ ಹೀಗಾದೆ ಮೆಟ್ಟಿಲೇರಿದರೆ ಸಾಕೆ ಇಳಿಯಲು ಅದೇ ಮೆಟ್ಟಿಲ ಇಟ್ಟವರು ಯಾರೋ? ಅಡಿಪಾಯ ಇಲ್ಲದೇ ಗುಡಿ ಹೇಗೆ ಆದೀತು ಅಡಿಗಡಿಗೆ ತುಳಿಯಬೇಡ ಮೂಡ ನಿನ್ನ ಐಕ್ಯದಿ ಅವರ ಗುಂಡಿ ತೋಡುವರು ಗುಡಿಯೊಳಗೆ ಈ ಬೇದ ಬಾವ ಯಾಕೋ..? -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
