ನಮ್ ನಾಡೇ ಚೊಲೋ ಐತ್ರಿ
ತರತರದ ಭಾಗ್ದಾಗ ತರತರದಿ ಮೆರೆದಾಳ್ರೀ ಒಂದೊಂದು ಜಿಲ್ದಾಗ ಚಂದ ಚಂದ ನುಲಿತಾಳ್ರೀ ದಮ್ ಐತಿ ದಾರವಾಡದಾಗ್ ಗಮ್ ಐತಿ ಮೂಡ್ದಾಗ ಬುಕ್ನಾಗಿನಂಗೆ ಮಾತಾಡ್ತಾರ್ರೀ ನಮ್ ಮಲ್ನಾಡ್ದಾಗ್ರೀ ಅದಕೇರಿ ನಮ್ ಬಾಷೆನ ಉತ್ತರದಾಗಿ ಬಾಷೇಲಿ ಅವರೆ ಸೊಗಡೈತ್ರೀ ದಕ್ಷಿಣದಾಗ ಸಣ್ಣ ಮೀನ್ ಗಮಲೈತ್ರೀ ಮಲೆನಾಡ್ನಾಗ ನೋಡ್ರೀ ಎಂತೆಂತಾ ಜಾಗೈತ್ರೀ ಅದ್ಕೇರಿ ನಮ್ ಬಾಷೆ ಬಾಳಾ ಚೋಲೋ ಐತ್ರೀ ಕಲ್ ಕಡೆದು ಗುಡಿ ಮಾಡ್ಯಾರ್ರೀ... ಕಂಬದ ಮ್ಯಾಲ ಹಾಡ್ ನುಡಿಸ್ಯಾರ್ರೀ ಕಬರಿಲ್ದೆ ಕನ್ನಡ ಬೈದೋರು ಗಡಿ ದಾಟ್ಯಾರೀ ಕುಂದಾದೊಳಗ ಕನ್ನಡದ ಕಿಚ್ಚೇ ಹಚ್ಯಾರೀ ಅದ್ಕೇರಿ ನಮ್ ನಾಡೇ ಚೊಲೋ ಐತ್ರೀ.. ಒಣಕೀಲಿ ಕುಟ್ಟಿ ಹೈದರನ್ನ ಹೆದರ್ಯ್ಸಾರೀ.. ನರ್ಮದೆಗೆ ನುಗ್ಗಿ ನುಗ್ಗಿ ಬಡಿದ ದಕ್ಷಿಣ ಪಥೇಶ್ವರ ನಮ್ಮವನ್ರೀ ನಿಮ್ ನಿಮ್ ನಾಡ್ನಾಗ ನಮ್ ನಮ್ವರನ್ನ ಮರೆತ್ರೆ ಹೆಂಗೇಳ್ರೀ ಪ್ರಿತಿಸ್ರೀ ಯಾಕಂದ್ರೆ ನಮ್ ನಾಡು ಚೋಲೋ ಐತ್ರೀ ಬಾಷೆದಾಗ್ಲೂ ಸೊಗಡೈತ್ರಿ ತರ ತರಹೇವಾರಿ ಗಡಸೈತ್ರಿ.. ಉತ್ರದಾಗ ಜೋಳದ ರೊಟ್ಟೈತ್ರೀ ರಟ್ಟಿ ತಟ್ಟಿ ಕುಸ್ತಿ ಆಡೋ ತಾಕತ್ ಕೊಟ್ಟೈತ್ರಿ ಅದಕೇರಿ ನಮ್ ಬಾಷೆ ಚೊಲೋ ಐತ್ರಿ ಈ ಕಡೆ ಬರ್ರೀ ಪಡುವಣದಾಗ ಕಡಲೈತ್ರೀ ಕಡಲೊಳಗೆ ಕನ್ನಡ ಬಾಷೆ ತೇಲುತೈತ್ರಿ ನಮ್ ತಾಯಿ ದಾರವಾಡದ ಪೇಡಾದಂಗ ನಾಲಿಗೇಲೆ ಮಸ್ತೈತ್ರಿ ಮಾತಾಡ್ರೀ ನಿಮ್ ಅಪ್ಪಂದ್ ಏನ್ ಹೋಕ್ಕಾತ್ರೀ ಜೀವ ನೀಡಿದ್ ತಾಯಿ ಆಕಿ ಎದೆ ತಟ್ಟಿ ಹೇಳ್ರೀ ನಮ್ ನಾಡು ನಮ್ ಬಾಷೆ ನಮ್ದೈತ್ರೀ ನಮ್ದೈತ್ರೀ ಕವಿಗಳೆ ತವರೂರಾಗ ತರತರದ ಕಥೆ ಐತ್ರೀ ಮಲೆನಾಡ್ನಾಗ ಕುವೆಂಪು ಕಂಪೈತ್ರಿ ದಾರವಾಡದಾಗ ಬೇಂದ್ರೆ ಬರಹ ಹೆಂಗೈತ್ರಿ ನಿಮ್ಗೆಲ್ಲ ಪರಬಾಷೆ ಹುಚ್ಚೈತ್ರೀ ಬಿಡ್ರೀ ಅದನ್ನ ಬಿಡ್ರೀ ಹುಟ್ಟೋಕೆ ಈ ಊರ್ ಬೇಕು ಆಡೋಕೆ ಆ ಬಾಷೆ ಬೇಕೇನ್ರಿ ಜೀವನ ಕೊಟ್ಟ ನಾಡೈತ್ರೀ ಜೀವ ಕೊಟ್ಟದ್ರು ಕನ್ನಡ ಕಟ್ಬೇಕ್ರೀ
Poetry Books 50% Off
Bestselling collections from top poets
