ಅಮ್ಮ
ಅವಳು ನಿಸ್ವಾರ್ಥ ಪ್ರೀತಿ ಕೊಡುವ ಜೀವ.. ಈ ಜೀವ - ಜೀವನ ಅವಳು ಕೊಟ್ಟ ಭಿಕ್ಷೆ.. ನಾ ಹೇಗೆ ತೀರಿಸಲಿ ಅವಳ ಋಣವ.. ಸಾವಿರ ಜನುಮ ಸಾಲದು.. ಬಿಡಿ ಪೂರ್ತಿ ನನಗಾಗಿ ಬದುಕುವ.. ಅವಳು ಅವಳಿಗಾಗಿ ಏನೂ ಬಯಸಳು.. ಎಂದೂ ಬಯಸದವಳು.. ಅಮ್ಮ..ಅಮ್ಮಾ.. ಅಮ್ಮಾ... ಏಸೊಂದು ಸಲ ಕೂಗಿದರು ಅಮ್ಮ.. ನಿನ್ನ ಋಣವೆಂಬುದು ತೀರದು.. ಕ್ಷಮಿಸಿಬಿಡು ನನ್ನ.. ಒಮ್ಮೆಯಾದರೂ.. ನಾ ಅರಿತೋ.. ಅರಿಯದೆಯೋ ಮಾಡಿದ ಪಾಪಗಳೆಲ್ಲವಾ.. ನಿನಗಾಗಿ ನೀ ಬದುಕಲೇ ಬೇಕಮ್ಮ.. ಜೊತೆಗೆ ನನಗೂ.. ಬದುಕು ಕಲಿಸಲು.. ಅಮ್ಮ..ನೀ ನನ್ನಮ್ಮ.. ಎಂದೂ ನೀ ನನಗಮ್ಮ..
Ad
Poetry Books 50% Off
Bestselling collections from top poets
Shop Now →
