ಗೆಳತಿ
ಕಂಡಿಲ್ಲ ನಿನ್ನಂತಿರ್ಪ ಪೆಣ್ಣನ್ ನೋವಿನಲೂ ನಗುತಿರ್ಪ ವದನವ ಕಂಡಿಂದು ಮನ ಕದಡಿಹುದೆನಗೆ... ಮರು ಮಾತಾಡದೇ ಮಾಡಿರ್ಪ ನಿನ್ನ ಭಾವಕೆ ಬಂದಿಯಾಗಿಹೆ ನಾ... ಸುಖ ದುಃಖಗಳ ಅನುಭವಿಸಿಯೇ ತೀರಬೇಕೆಂದಿರ್ಪ ನಿನಗೆ ನನ್ನ ಕೋಟಿ ವಂದನೆಗಳ್.. ಬಲು ಅಪರೂಪ ನಿನ್ನಂತಿರ್ಪ ಸ್ನೇಹಿತರ್ ಸಿಗಲು... ನಾ ಧನ್ಯ ನಿನ್ನ ಒಡನಾಟ ಹೊಂದಿರಲ್... ಸಂತಸವೆನಗೆ ನಿನ್ನ ಕಿರು ನಗೆಯ ಮೊಗವ ಕಾಣಲ್... ಪರಶಿವನ ಬೇಡಿಹೆನ್ ಕೊಡದಿರು ಎನ್ನ ಗೆಳತಿಗೆ ದು಼ಃಖವನ್...
Ad
Poetry Books 50% Off
Bestselling collections from top poets
Shop Now →
