ಪ್ರೆಂಡ್ಸ್
ಶಾಲೆಯ ಕಪ್ಪುಹಲಗೆಯ ಮೇಲೆ ನಾ ಬರೆದ ಹೆಸರಿನವರು ಕಾಲೇಜಿನಲಿ ಮಗಾ ಆ ಹುಡುಗಿ ನಿನಗಾಗಿಯೇ ಎಂದವರು ಜೀವನದಲಿ ಪ್ರತಿಕ್ಷಣ ಜೊತೆಯಲ್ಲಿಯೇ ಇರುವವರು ಕಷ್ಟದ ದಿನಗಳಲಿ ಕೇಳದೆಯೇ ಸಹಾಯ ಮಾಡುವವರು ಆಗಾಗ ಸುಮ್ಮನೆ ಸಮಸ್ಯೆ ಹೊತ್ತು ತರುವವರು ಅರಿಸ್ಟಾಟಲ್ ಅವರ ಸಂಘ ಜೀವಿ ಈ ಸ್ನೇಹಿತರು ಆಸ್ತಿ ಅಂತಸ್ತಿನ ಲೆಕ್ಕವಿಡದವರು ಜಾತಿ ಧರ್ಮಗಳ ಭೇದ ಅರಿಯದವರು ಕಪ್ಪುಬಿಳುಪಿನ ಭಾವ ಇಲ್ಲದವರು ನಮ್ಮೊಳಗಿನ ಸಂತೋಷವ ಹೆಚ್ಚಿಸುವವರು ಹಂಚಿ ತಿನ್ನುವುದ ಕಲಿಸಿದವರು ಕ್ಷಮಿಸು ಎಂದೊಡನೆ ನೂರು ತಪ್ಪುಗಳಿದ್ದರೂ ಕ್ಷಮಿಸಿ ಬಿಡುವಂತಹ ವಿಶಾಲ ಹೃದಯವಂತರು ಕಾರಣವೇ ಇಲ್ಲದೆ ಮುನಿಸಿಕೊಳ್ಳುವವರು ವಿನಾಃಕಾರಣ ಜಗಳ ಆಡುವವರು ನಾ ಪಡೆದ ಅತ್ಯಂತ ದುಬಾರಿ ಕೊಡುಗೆ ನನ್ನ ಸ್ನೇಹಿತರು.....
Ad
Poetry Books 50% Off
Bestselling collections from top poets
Shop Now →
