ನೋವು ಮಾಯವಾಗಲಿ
ನಿನ್ನ ಖುಷಿ ನೋಡ್ಲಿಕ್ಕೆ ನನಗೆ ಇಷ್ಟ ನಿನ್ನ ದುಃಖದ ದುಗುಡವೇನೆಂಬುದ ಅರ್ಥ ಮಾಡಿಕೊಳ್ಳುವುದೇ ನನಗೆ ಕಷ್ಟ ಕಳೆದುಹೋದ ದಿನಗಳು ನೆನಪುಗಳಂತೆ ಕಾಣು ನೋವಿನ ಕುರುಹುಗಳಾಗಿ ಅಲ್ಲ ನಾ ಯಾರನ್ನೂ ಹಚ್ಚಿಕೊಂಡವನಲ್ಲ ನೀ ನನ್ನ ನೆಚ್ಚಿನ ಸ್ನೇಹಿತೆಯಾಗಿರಲು ನಿನ್ನ ಈ ಮನಃಸ್ಥಿತಿಯ ಕಂಡು ನಿನ್ನಿಂದ ಮರುಕಗೊಳ್ಳದೇ ಇರಲಾಗುತ್ತಿಲ್ಲ. ಭಾವನೆಗಳ ವ್ಯಕ್ತಪಡಿಸುವಲ್ಲಿ ನಾ ವಿಫಲ ಆದ ಕಾರಣ ಈ ಕವನಗಳ ಮೊರೆ ಹೋಗಿರುವೆ ನಿನ್ನ ಜೊತೆ ಈ ಸ್ನೇಹಿತ ಸದಾ ಇರುತ್ತಾನೆ ಎಂಬುದ ನೀ ಮರೆಯಬೇಡ ಗೆಳತಿ ಕ್ಷಮಿಸೆನ್ನ ನಾ ಹಚ್ಚಿಕೊಂಡರೆ ಹಾಗೆಯೇ ಸ್ವಲ್ಪ ಪೀಡಿಸುತ್ತೇನೆ ಆಗಾಗ ಕಾಡಿಸುತ್ತೀನಿ ಎಲ್ಲದಕ್ಕೂ ಕೊನೆಯಿದೆ ನಿನ್ನ ಮನದ ನೋವು ಕೊನೆಗೊಳ್ಳಲೆಂದು ಆ ಪರಶಿವನಲ್ಲಿ ಪ್ರಾರ್ಥಿಸುವೆ. ಮನದ ದುಃಖವೇನೇ ಇರಲಿ ಅದೆಲ್ಲ ಮಾಯವಾಗಲಿ ಹಳೆಯ ನೆನಪುಗಳೆಲ್ಲ ಮಾಸಿದ ಗಾಯದಂತೆ ನಾವಾಗೇ ಗೀಚಿದರೆ ನೋವಾಗುತ್ತದೆಯೇ ವಿನಃ ಕಳೆದುಹೋದ ದಿನಗಳು ಮತ್ತೆ ಮರಳಿ ಬರುವುದಿಲ್ಲ ಜೀವನವೇ ಹಾಗೇ ಯಾರೂ ಊಹಿಸಿರದ ಯಾರಿಗೂ ಅರ್ಥವೇ ಆಗದ ಮಾಯಾವಿ ನಾವಂದುಕೊಂಡಂತೇ ಎಲ್ಲವೂ ನಡೆಯೊಲ್ಲ ಪ್ರತಿಯೊಂದು ಕ್ರಿಯೆಯೂ ಆ ಪರಮಾತ್ಮನ ಆಜ್ಞೆ ಇಲ್ಲದೆ ನಡೆಯೊಲ್ಲ ಎಂಬುದೇ ಸತ್ಯ
Poetry Books 50% Off
Bestselling collections from top poets
