ನೆಗಡಿ
ಮಾತು ಹೊರಳದಂತೆ ಮಾಡಿರುವೆ ನೀ ಮೂಗಿನ ಮೇಲೆ ಸಿಟ್ಟು ಬರಿಸಿದ್ದು ನೀ ತಾಳ್ಮೆಯ ಪರೀಕ್ಷೆ ನೀಡಿದ್ದು ನೀ ಬೇಡವೆಂದರೂ ಬಳಿ ಬಂದದ್ದು ನೀ ಮುಖದ ಮೇಲೆ ಕೈ ಸದಾ ಇರುವಂತೆ ಮಾಡಿದ್ದು ನೀ ಕರವಸ್ತ್ರದ ಅವಶ್ಯಕತೆಯ ತಿಳಿಸಿದ್ದು ನೀ ಕೆಟ್ಟ ಸಿಟ್ಟಿನ ಪರಿಚಯ ನಿನ್ನಿಂದ ಒಮ್ಮೆ ಬಂದ ನೀ ಮರಳಿ ಹೋಗುವವರೆಗೂ ನರಕವೇ ನನಗೆ ಮುಖ ಮುಚ್ಚಿಕೊಳ್ಳುವಂತೆ ಮಾಡಿದ್ದು ನೀ ಜನರಿಂದ ದೂರ ಸರಿಯುವಂತೆ ಮಾಡಿದ್ದು ಮಾತ್ರ ನೀನೆ
Ad
Poetry Books 50% Off
Bestselling collections from top poets
Shop Now →
