ಗೈಪ್ರೇ....
ಒಬ್ಬ ಚಂಚಲ ಇನ್ನೊಬ್ಬ ನಿಶ್ಚಲ ಅವಳು ಮಾತ್ರ ಹರಿವ ನದಿ ಒಬ್ಬ ಅಮಾಯಕ ಇನ್ನೊಬ್ಬ ನಿಸ್ಸಹಾಯಕ ಅವಳು ಮಾತ್ರ ಸಮ್ಮೋಹನ ಒಬ್ಬ ತೋಚಿದ್ದು ಗೀಚುವವ ಇನ್ನೊಬ್ಬ ರೀಲ್ಸ್ ಕಳಿಸುವವ ಅವಳು ಮಾತ್ರ ಎಲ್ಲವನ್ನೂ ಅರ್ಥೈಸಿಕೊಳ್ಳುವ ಗೆಳತಿ ಒಬ್ಬ ಪಾಗಲ್ ಪ್ರೇಮ್ ಇನ್ನೊಬ್ಬ ಸ್ನೇಹದ ಗಣಿ ಅವಳು ಮಾತ್ರ ನಮಗೆ ದೊರೆತ ಐಶ್ವರ್ಯ.... ಒಬ್ಬ ನೋವ ಮರೆಮಾಚಿ ನಗುವವ ಇನ್ನೊಬ್ಬ ಯಾವ ಭಾವನೆಯನ್ನೂ ಮರೆ ಮಾಚದೇ ತೋರ್ಪಡಿಸುವವ ಅವಳು ಮಾತ್ರ ಎಲ್ಲ ಭಾವನೆಗಳ ತವರೂರು... ಒಬ್ಬ ಒಳ್ಳೆಯ ಮನಸ್ಸುಳ್ಳ ಬಳ್ಳಾಪುರದವ ಇನ್ನೊಬ್ಬ ನಂಬಿಕೆಯ ಪಡೆದುಕೊಂಡವವ ಅವಳು ಮಾತ್ರ ಪರಶಿವನ ಪರಮ ಭಕ್ತೆ...
Ad
Poetry Books 50% Off
Bestselling collections from top poets
Shop Now →
