ನೀ ಮಾತ್ರ
ಜಗದಲಿ ಕೇವಲ ನೀ ಮಾತ್ರ ಜೊತೆ ಇರಲು ಆ ಸೂರ್ಯ ಇಲ್ಲದಿರೆ ನೀ ನನ್ನ ಬಾಳ ಬೆಳಕಾಗಿರುವೆ ಜಗದಲಿ ಕೇವಲ ನೀ ಮಾತ್ರ ಜೊತೆ ಇರಲು ಪ್ರತಿ ಸಂಖ್ಯೆಯೂ ನಿನ್ನ ಹೆಸರಿಂದ ಶುರುವಾಗುವುದು ಆಗಸದ ನಕ್ಷತ್ರಗಳೆಲ್ಲ ಮಿನುಗುವುದ ಮರೆತರೆ ನೀ ಮಾತ್ರ ಧ್ರುವತಾರೆಯಂತೆ ಸದಾ ಮಿನುಗುತ್ತಿರುವೆ ಪ್ರಪಂಚವೇ ಸ್ಥಬ್ದವಾಗಿರುವ ವೇಳೆಯಲಿ ನಾ ಮಾತ್ರ ನಿನ್ನ ದನಿ ಕೇಳಿಸಿಕೊಳ್ಳುತ್ತಿರುವೆ ವರುಷಗಳಲ್ಲಿ ದಿನಗಳೇ ಮಾಯವಾದರೆ ನಾ ಮಾತ್ರ ನಿನ್ನ ಹುಟ್ಟಿದ ದಿನವನ್ನೇ ಸದಾ ಆಚರಿಸುವೆ ಪ್ರತಿ ಹೆಜ್ಜೆಯೂ ನನ್ನ ಕೊನೆಯ ಹೆಜ್ಜೆಯಾದರೆ ನಾ ಮಾತ್ರ ನಿನ್ನೊಂದಿಗೆ ಹೆಜ್ಜೆಯ ಹಾಕುವೆ ಪ್ರಕೃತಿ ವಿಕೋಪಕ್ಕೆ ಒಳಗಾದರೆ ನಾ ಮಾತ್ರ ನಿನ್ನ ನಗುವಿನ ಕಂಪನದಲಿ ಸಿಲುಕುವೆ ಪ್ರಪಂಚದ ಪ್ರಳಯಕೂ ಮುನ್ನ ನಾ ಮಾತ್ರ ನಿನ್ನೊಂದಿಗೆ ಸಮಯ ಕಳೆಯಲು ಆಶಿಸುವೆ ಮಹಾಯುದ್ಧಗಳನೇ ನಿಲ್ಲಿಸಬಲ್ಲೇ ನೀ ಮಾತ್ರ ನಿನ್ನೊಂದಿಗೆ ಸಂಧಾನವ ಮಾಡಿಕೊಂಡರೆ ಮಾಯಾಲೋಕದಲಿ ವಿಹರಿಸುವೆ ನೀ ಮಾತ್ರ ಮೋಡಿಯ ಮಾಡುವುದನು ನಿಲ್ಲಿಸಿದರೆ
Poetry Books 50% Off
Bestselling collections from top poets
