ನಿದ್ದೆ
ನನ್ನ ಸ್ನೇಹಿತೆಯೋರ್ವಳಿಹಳು ಕುಂಭಕರ್ಣನ ತಂಗಿಯಂತೆ ಹಾಡ ಕೇಳುತ್ತಲೇ ನಿದ್ರಿಸುವಳು ಸಂದೇಶ ಓದುತ್ತಲೇ ತೂಗಿಹಳು ಕಥೆ ಕೇಳುತ್ತಾ ಮಗುವಂತೆ ಮಲಗುವಳು ನನ್ನ ಸ್ನೇಹಿತೆಯೋರ್ವಳಿಹಳು ಆ ನಕ್ಷತ್ರ ಮಿನುಗುವಂತೆ ಮಲಗಿಹಳು ಆ ಆಕಾಶ ತೇಲುವಂತೆ ನಿದ್ರೆಯಲಿ ತೇಲುತಿಹಳು ಸೂರ್ಯನಾ ಕಿರಣಗಳೂ ಕೂಡ ಅವಳ ಸಮ್ಮಿತಿಯ ಪಡೆಯಬೇಕೆಂಬಂತೆ ಮಲಗಿಹಳು ನನ್ನ ಸ್ನೇಹಿತೆಯೋರ್ವಳಿಹಳು ಕನಸ್ಸೆಂಬ ಬಣ್ಣದ ಲೋಕದಲಿ ವಿಹಾರಿಸುತ್ತಿಹಳು ಅವಳ ಮುದ್ದಾದ ಮನವಿಂದು ವಿಶ್ರಾಂತಿಯ ಪಡೆಯುತಿರು ನಾ ಮನಸೋತು ಎಬ್ಬಿಸಿಯೇ ಬಿಟ್ಟೆ...
Ad
Poetry Books 50% Off
Bestselling collections from top poets
Shop Now →
