ಬಾಲ್ಯದ ನೆನಪುಗಳು
ಮೊದಲು ಬಂದ ಮಳೆಯ ಹನಿಗೆ, ಸಿಡಿದ ಬರ ಸಿಡಿಲಿಗೆ, ಮಿನುಗಿ ಭೂಮಿಗೆ ಬಿದ್ದ ಆಲಿಕಲ್ಲಿನ ಅಂದಕ್ಕೆ, ಮಿಂಚನ್ನು ತುಂಬಿಕೊಂಡಿರುತ್ತಿತ್ತು ನನ್ನ ಕಣ್ಣೋಟ. ಅಪರೂಪಕ್ಕೆ ಆ ಬಾನಿನಲ್ಲಿ ಹಾರುತ್ತಿದ್ದ ವಿಮಾನದ ಸದ್ದಿಗೆ, ಅಂಗಳಕ್ಕೆ ಓಡಿಬಂದು, ಕಂಗಳ ಅರಳಿಸಿ ನೋಡುತ್ತಿದ್ದೆ ಆ ವಿಮಾನದ ಓಟ. ಕಾಗದದ ಹಾಳೆಗಳ ಪಟಪಟನೆ ಕೂಡಿಸಿ, ಬಿರುಬಿಸಿಲ ಬೇಗೆಯಲ್ಲೂ ಹಠ ಹಿಡಿದು ಬಿಡುತ್ತಿದ್ದ ಬಣ್ಣದ ಗಾಳಿಪಟ. ಮೊಗದಲ್ಲಿ ಮಂದಹಾಸ ತುಂಬಿಕೊಂಡು, ತೃಪ್ತಿಯಿಂದ ಎಲ್ಲರೂ ಸೇರಿ ಸವಿಯುತ್ತಿದ್ದ ಬೆಳದಿಂಗಳ ರಸದೂಟ. ವರ್ಷದಲ್ಲೊಮ್ಮೆ ಹರ್ಷ ನೀಡಿ ಹೊಸದಾಗಿ ಕಾಣಿಸುತ್ತಿದ್ದ ಜಾತ್ರೆಯ ಮಿಠಾಯಿ, ಅಚ್ಚರಿ ಮೂಡಿಸುತ್ತಿದ್ದ ಆಟೋಟ. ಹಬ್ಬದಲ್ಲೊಂದು ಹುಬ್ಬನೇರಿಸಿ ನನ್ನಪ್ಪ ಹೊಸದಾಗಿ ತಂದ ಬಣ್ಣದಂಗಿಯ ತೊಡಲು ನಾ ಮಾಡಿದ ಪರದಾಟ. ನೋಟ ಗಡಿಯಾರದ ಕಡೆಗೆ, ಅಮ್ಮ ಮಾಡಿದ ಸಿಹಿತಿನಿಸಿನೆಡೆಗೆ ಇರುತ್ತಿತ್ತು ಕೇಳುವಾಗ ಪಾಠ. ಬಾರಿಯೂ ಪರಿಪರಿಯಾಗಿ ಸ್ಮರಿಸಿಕೊಂಡಾಗ,ಬಾಲ್ಯ ಬೇಕೆನ್ನುವ ಕಿಚ್ಚನ್ನು ಮತ್ತೆ ಹೊತ್ತಿಸುವುವು ಸಿಹಿನೆನಪುಗಳ ಮಹಾಕೂಟ.
Poetry Books 50% Off
Bestselling collections from top poets
