ಕಾಯುವೆ ....
ನಾ ಹೇಗೆ ತಿಳಿಸಲೆಂಬುದ ಅರಿಯೇ ನಾ ಎಲ್ಲಿಂದ ಪ್ರಾರಂಭಿಸಲಿ ಎಂಬುದ ತಿಳಿಯೇ ನಾ ಅಮಿತವಾಗಿ ಯೋಚಿಸುತ್ತಿರುವೆ ನನ್ನ ಆಲೋಚನೆಗಳಲ್ಲಿ ಸಾವಿರ ಬಾರಿ ನಿನ್ನದೇ ಮನನ ಪ್ರತಿ ಪದವೂ ನಿನಗಾಗಿಯೇ ಬರೆಯುತ್ತಿರುವೆ ನಾ ಮಾಡಿಹ ತಪ್ಪನ್ನೆಲ್ಲ ಕ್ಷಮಿಸಿ ನನ್ನಲ್ಲಿಗೆ ಮರಳುವಂತೆ ಕೇಳುವ ಅರ್ಹತೆಯೂ ಎನಗಿಲ್ಲ ನನ್ನ ಮನ ನಿನ್ನ ನೋಯಿಸಿತೆಂಬ ಪಶ್ಚಾತಾಪದಲ್ಲಿ ನಾ ಇಂದಿಗೂ ಇರುವೆ ನಿನಗೊಂದು ಕರೆಯ ಮಾಡಿ ನಿನ್ನ ಸ್ವರ ಕೇಳುವಾಸೆ ನನ್ನ ಮನಕೆ ಇರುವ ಬಹುದಿನಗಳ ಬಯಕೆ ನಿನ್ನ ಭೇಟಿಗಾಗಿ ಪ್ರತಿಕ್ಷಣವೂ ಕಾಯುತ್ತಲೇ ಕಾಲ ಹರಣ ಮಾಡುತ್ತಿರುವವ ನಾ
Ad
Poetry Books 50% Off
Bestselling collections from top poets
Shop Now →
