ಅಂತೆ.....
ನಾ ಗೀಚಿದ ಬರಹಗಳೆಲ್ಲ ಈ ಮುಸ್ಸಂಜೆಯ ಹಕ್ಕಿಗಳ ಚಿಲಿಪಿಲಿಯಂತೆ.... ನೀ ತೊರೆದ ನನ್ನ ಕಥನದ ಕಲ್ಪಿಸಲೂ ಸಾಧ್ಯವಾಗದ ಸಾಲಿನಂತೆ.... ಮುನ್ಸೂಚನೆಯೂ ನೀಡದೆ ಮುನಿಸಿಕೊಂಡ ನಿನ್ನ ಮೂಗುತ್ತಿಯಂತೆ.... ನಾ ಗೀಚಿದ ಬರಹಗಳೆಲ್ಲ ಈ ನಿಶ್ಯಬ್ಧ ಸಾಗರದ ಅಲೆಗಳಂತೆ.... ಮಾತೊಂದಿಹುದೆನಗೆ ಹೇಳಲಿಚ್ಚಿಸದ ಬಳಿ ಬಂದರೂ ಮೂಕನಾದಂತೆ.... ನಾ ಗೀಚಿದ ಬರಹಗಳೆಲ್ಲ ಆಕಾಶದ ಅಮಾವಾಸ್ಯೆ ಚಂದ್ರನಂತೆ.... ನಿನಗಿಲ್ಲ ನನ್ನ ನೆನಪು ನನಗೇಕೆ ನಿನ್ನ ಗುಂಗು ಎಂಬಂತೆ... ನಾ ಗೀಚಿದ ಬರಹಗಳೆಲ್ಲ ಬಿಳಿ ಮೋಡ ಮಳೆಯಾದಂತೆ...
Ad
Poetry Books 50% Off
Bestselling collections from top poets
Shop Now →
