ಗಾಯಿ
" ಹೇಯ್ ಎಷ್ಟು ಸೋತರಷ್ಟೂ ಮತ್ತೆ ಮತ್ತೆ ಸೋಲಬೇಕೆನ್ನಿಸುತಿದೆ ಅದು ಅತಿರೇಕದ ಪ್ರಿತಿಯಂದಲ್ಲ ಅತಿಯಾಗಿ ಕಾಡುವ ಕನಸಿನಿಂದಷ್ಟೆ. ಮರೆತಷ್ಟು ಮತ್ತೆ ಮೆರೆಯುತ್ತಿರುವೆ ನೀ ಎನ್ನ ನೆನಪುಗಳನ್ನೇ ಕಬಳಿಸುತ್ತ. ನಾ ಸೋತಿಹೆನು ನಿನ್ನಿಂದಲ್ಲ ಅಷ್ಟೆ ನನ್ನಲ್ಲಿರುವ ಮಾಯದ ಗಾಯಗಳಿಂದ. ಬಿಟ್ಟು ಬಿಡು ಒಂಚೂರು ಯೋಚಿಸದೆ ಪಟ್ಟಿಡಿದು ಮತ್ತೆ ಮತ್ತೆ ಕಾಡಬೇಡ. ನೊಂದು ಮೆತ್ತಗಾಗಿರುವ ಈ ಬದುಕಿನಲಿ ಮತ್ತಿನ್ನೇನು ಉಳಿದಿಲ್ಲ. ಮತ್ತಿನ್ನೇನು ಉಳಿದಿಲ್ಲ. ಶವಯಾತ್ರೆಯಂತಿದೆ ಬದುತು ಖುಷಿಯಿಲ್ಲದೇ ಹೊರಟಿದೆ ಮೆರವಣಿಗೆ. ನೋಡಿ ನಕ್ಕವರಿರುವರೇ.. ಹೊರತು ಸಾಂತ್ವನ ಹೇಳುವ ಸಂಬಂಧಗಳಿಲ್ಲ. ಅಂಕು ಡೊಂಕಾಗಿಹುದು ದಾರಿ ನಡೆದಷ್ಟೂ ಸವೆಯುತ್ತಿಲ್ಲ ಗುರಿಯೆಡೆಗೆ. ನನ್ನ ನಿಲ್ದಾಣವೇ ಬಂದಿದೆ ನಾ ಮುಟ್ಟುವ ಮೊದಲೇ ಇನ್ನ ಮುಗಿದಿದೆ ಪಯಣ ಇಳಿಯಬೇಕಷ್ಟೆ .!! -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
