ಸುಮತಿ
ಕಾದ ಕಾವಲಿಯ ಮೇಲೆ ಸುಡುತಲಿರೊ ಸುಮವೊಂದು ನಗುತ ಕೇಳುತಲಿಹುದು ಎನ್ನೇಕೆ ಸುಡುವೇ ಎಂದು. ಎನ್ನ ಪೂರ್ವರ ನಡುವೆ ನಗುತ ಚಂದದಿ ನಾನಿದ್ದೆ ಸುಳ್ಳನ್ಹೇಳಿ ಮುರಿದು ಪೂಜೆಗಿಟ್ಯಲ್ಲೋ....!! ಅವನ ತಲೆಯ ಮೇಲೆ ನಗುತ ಕೂತಿಹೆ ನಾನು ಪೂಜೆ ಮುಗಿದಾ ಮೇಲೆ ಚಿತೆಗೆ ಇಟ್ಟೆಯಲ್ಲೋ..!! ಇಷ್ಟೇ.. ಜೀವನವೆನಗೆ ಮತ್ತೆ ಬರಲಾರೆ ಇನ್ನು ನೀ ಸತ್ತರೇ ನೋಡು ನನ್ನವರ ನಿನ್ನ ಮೇಲಿಟ್ಟರಲ್ಲೋ ...!! ಯಾತರದಿ ನಾನಿರಲು ಯಾತನದಿ ನೊಂದಿಹೆನು ಶಾಪವಿಡುವೆನು ನಿನಗೆ ನಿನ್ನೆದೆಗೆ ಎನ್ನನಿಡುವರೋ...!! -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
