ಹುಚ್ಚು ಬರವಣಿಗೆ
ನಿನ್ನೊಳಗಿನ ಭಾವನೆಗಳೆಲ್ಲ ಜೀವಿಸಿದ್ದಿದ್ದರೆ ನಾ ಇಂದು ಹೀಗೆ ಇರುತ್ತಿರಲಿಲ್ಲವೇನೋ.... ನೀ ನೀಡಿದ ಉಡುಗೊರೆಗಳಿಗೆಲ್ಲ ಪ್ರೀತಿ ತುಂಬಿದ್ದರೆ ಅವೆಲ್ಲ ನೆನಪುಗಳಾಗಿ ಕಾಡುತ್ತಿರಲಿಲ್ಲವೇನೋ.... ನಿನ್ನ ಅಪ್ಪುಗೆಯಲ್ಲಿ ನಂಬಿಕೆ ಉಳಿದಿದ್ದರೆ ನನ್ನ ಪ್ರತಿ ರಾತ್ರಿ ಕಾಳರಾತ್ರಿಯಾಗುತ್ತಿಲ್ಲವೇನೋ.... ನಿನ್ನ ಮಾತಿನಲಿ ಸತ್ಯ ಅಡಗಿದ್ದಿದ್ದರೆ ನನ್ನ ಈ ಹುಚ್ಚು ಬರವಣಿಗೆಯ ಅವಶ್ಯಕತೆ ಇರುತ್ತಿರಲಿಲ್ಲವೇನೋ.....
Ad
Poetry Books 50% Off
Bestselling collections from top poets
Shop Now →
