ಹೊರಬರಲಾಗದೇ......
ರಾಶಿರಾಶಿ ನೆನಪುಗಳ ನದಿಯಲ್ಲಿ ನೀ ಅಂದು ತೋರಿದ್ದ ಪ್ರೀತಿಯ ಸುಳಿಯಲ್ಲಿ ಸಿಲುಕಿರುವೆ ಹೊರಬರಲಾಗದೇ... ನೀ ಮರಳಿಬಾರಲಾಗದ ಗ್ರಹದಲ್ಲಿ ಇರುವೆಯಾ ಏನೋ, ನನ್ನ ಪ್ರಪಂಚವೇ ನೀ ಆಗಿರುವೆ ಇಂದಿಗೂ.... ನಿನ್ನ ಹುಡುಕಾಟದಿಂದ ಹೊರಬರಲಾಗದೇ..... ಮರೆವು ರೋಗವಾಗಿದ್ದರೆ ನನಗೆ ಬರಲಿ ನಿನ್ನ ನೆನಪು ಸಂಪೂರ್ಣ ಮರೆಯುವ ವರ ನನಗೆ ಸಿಗಲಿ ಕೊಲ್ಲುತ್ತಿಹುದು ನನ್ನೆದೆಯ ನಿನ್ನ ಗುಂಗಿಂದ ಹೊರಬರಲಾಗದೇ.....
Ad
Poetry Books 50% Off
Bestselling collections from top poets
Shop Now →
