ಇರುವೆ
ಕಾರಣವೇ ತಿಳಿಯದೇ ನಗುತಿರುವೆ ಮುಖಚಿತ್ರವ ಕಂಡೊಡನೆ ಅಳುತಿರುವೆ ಹಂಚಿಕೊಂಡ ಕ್ಷಣಗಳ ನೆನೆದು ದುಃಖಿಸುತಿರುವೆ ಎಲ್ಲಿದ್ದರೂ ಖುಷಿಯಾಗಿರು ಎಂದು ಬಯಸುತ್ತಿರುವೆ ನಾ ಮಾಡಿದ ಸುಳ್ಳಿನ ಪ್ರಮಾಣಗಳ ಲೆಕ್ಕವಿಡುತ್ತಿರುವೆ ನೀ ತೋರಿದ ಸ್ವಚ್ಛ ಪ್ರೀತಿಯ ಭದ್ರ ಪಡಿಸುತ್ತಿರುವೆ ನೀ ಇಲ್ಲದ ಜೀವನವ ಸಾಗಿಸುತ್ತಿರುವೆ ಶೂನ್ಯದ ಹಾದಿಯಲಿ ನಾ ಹೋಗುತ್ತಿರುವೆ ನಿನ್ನೊಟ್ಟಿಗಿನ ಚಿತ್ರಪಟಗಳ ಸುಡುತ್ತಿರುವೆ ಭಾವನೆಗಳ ಬೆಂಕಿಯಲಿ ಬೇಯುತ್ತಿರುವೆ ಮರೆಯಲಾರೆನೆಂಬ ನಿನ್ನ ಮರೆಯುತ್ತಿರುವೆ ಕಾರಣವೇ ತಿಳಿಯದೆ ನಾ ಅಳುತ್ತಿರುವೆ
Ad
Poetry Books 50% Off
Bestselling collections from top poets
Shop Now →
