ಚಕೋರಿ
ಯಾವ ಪರಿಯಲಿ ವರ್ಣಿಸಲೇಳು ನಿನ್ನಂದವ. ನೋಡಿದಷ್ಟೂ ನಶೆ ಏರುತಿದೆ ಇನ್ನೇಕೆ ಕುಡಿಯಲಿ ಹೇಳು ಮಧುಪಾನವ. ಆ ಕಣ್ಣೇಟೆ ಸಾಕೆನಗೆ ಒಂಚೂರು ಮೈ ಮರೆಯಲು ನೇವರಿಸುತ್ತಲೇ ಇರು ಆಗಾಗ ಬರುವ ಮುಂಗೂದಲ. ಅಷ್ಟೇ ಸಾಕೆನೆಗೆ ನಿನ್ನಾಗಾಗ ನೋಡಲು. ಅಬ್ಬಾ ಸೆಳತಕ್ಕೇನು ಕಡಿಮೆಯಿಲ್ಲ ಆ ನೋಟ ಅಬ್ಬಬ್ಬಾ ಎಂದರೆ ನಾ ಬರಸೆಳೆಯುವೆ ಹಿಡಿದು ಆ ನಿನ್ನ ಬಳುಕಾಡುವ ಸೊಂಟ. ಅಂದಗಾತಿ ನೀನು ಚಂದ್ರನೇ.. ಸೋತಿರುವಾಗ ನನ್ನೊಡನೆ ಆಟ ಆಡದಿರು ನಾನೇಗೆ ಗೆಲ್ಲಲಿ ಹೇಳು ನಿನಗೆ ನಾ ಸೋತಿರುವಾಗ. -ಅಂತರ್ಮುಖಿ(ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
