ಜ್ವಲ
ನನ್ನಂತವನಿಗೆ ಪ್ರೇಮ ತಗುಲದಿದ್ದರೂ ತುಣುಕನ್ನ ಮಿಂಚಿನಹಾಗೆ ಮನದಿ ಮೂಡಿಸುವ ಭರವಸೆಯ ಹೆಣ್ಣು; ಅವಳು! ಬ್ರಹ್ಮಚರ್ಯದ ದೀಕ್ಷೆಯಿಡಿದಿದ್ದ ಹೊತ್ತಿಗೆ ಜಗವು ತಿಳಿಗೇಡಿ ಎಂಬ ಬಿರುದನಿತ್ತಿತ್ತು! ಆದರೀಗ ತಡೆಹಿಡಿದಿದ್ದ ಅನುರಕ್ತತೆ ಅವಳ ಸಿಡಿಲ ಕಣ್ಣಿಗೆ ಒಡೆದು ಪ್ರವಾಹಿಸಿದೆ ನಿರಾಸೆಯ ಜಗದೊಳಗೆ ಇರುವೆಯೂ ಒಂದು ಭರವಸೆಯ ಪ್ರಾಣಿ ಈಗೀಗ ಹೀಗೆಯೇ ಬದಲಾಗಿದೆ ಸನ್ಯಾಸಿಯ ಮಾತು ಪ್ರೇಮಿಯ ಪ್ರವಚನ!
Ad
Poetry Books 50% Off
Bestselling collections from top poets
Shop Now →
