ಕರುನಾಡು
ಓ ನನ್ನ ಕನ್ನಡ ಸಹೃದಯಿ ಬಂಧುಗಳೆ ಅರಿಯಿರಿ ಕನ್ನಡ ನುಡಿಯಿರಿ ಕನ್ನಡ ||ಪ|| ನಾಗರಿಕತೆ ಉದಯದ ಕುರುಹು ಕಾಣ ಅರಸ ಅರಸಿಯರ ಆಳಿದ ಮಾದರಿ ತಾಣ ಶಿಲೆ ಕಲೆಗಳ ಶಿಲ್ಪ ಕಾವ್ಯ ಧಾರೆ ಸಂಗೀತ ತಲ್ಲಣ ಮಂದಿರ ಮಸೀದಿ ಬಸದಿ ಚೈತ್ಯಾಲಯ ಐಕ್ಯ ತಾಣ ||೧|| ರಜತ ಸುವರ್ಣ ಹಲವು ವರ್ಣ ಸಂಪನ್ನ ಕಂಡ ಬೀಡು ಶ್ರೀ ಗಂಧ ಹೊನ್ನೆ ಬೀಟೆ ತೆಂಗು ಕಂಗು ಬಾಗಿದ ಬಿನ್ನಾಣ ಶರದಿ ನದಿ ವನ ಜರಿ ಕೆರೆ ಹಾಲ ತೊರೆಯು ಬನಶಂಕರಿ ಭುವನೇಶ್ವರಿ ದೈವಿ ಶಕ್ತಿ ಹೊರನಾಡು ||೨|| ಪಂಪ ಪೊನ್ನ ರನ್ನ ಜನ್ನ ಜನ್ಮವೆತ್ತ ಈ ತಾಯ್ನಾಡು ಕುವೆಂಪು ಬೆಂದ್ರೆ ಮಾಸ್ತಿ ಕಾರಂತ ಅಕ್ಷರ ಆಸ್ತಿ ನನ್ನಾಡು ಹಳಗನ್ನಡ ಹೊಸಗನ್ನಡ ವಚನ ಕೀರ್ತನ ಕೀರ್ತಿ ನಾಡು ಋಷಿಮುನಿ ವ್ಯಾಸರಾಯ ಕನಕ ಪುರಂದರ ಭಕ್ತಿ ಹಂದರ ಸಾಂಗ್ಲಿ ಜತ್ತ ಸೊಲ್ಲಾಪುರ ಕೊಲ್ಲಾಪುರ ರಾಷ್ಟ್ರ ನನ್ನದು ಕಾಸರಗೋಡು ಕೆರಳವರೆಗೂ ಮೆರೆ ಮೀರಿದ ಗಡಿ ತುಳು ತಮಿಳು ತೆಲುಗು ಮರಾಠಿ ಕೊಂಕಣಿ ಭಾವೈಕ್ಯ ದೇಶ ವಿದೇಶ ಈಜಿಪ್ಟ್ ವರೆಗೂ ಈಜಿದ ನುಡಿಯು ಆಧುನಿಕತೆ ತಾಂತ್ರಿಕತೆಯಲಿ ನವನೀತವಾಗಲಿ ಕನ್ನಡ ಹೊಸ ನುಡಿ ತಂತ್ರ ಮನ್ವಂತರವಾಗಲಿ ನನ್ನ ಕನ್ನಡ ಆಡಳಿತ ನ್ಯಾಯ ಶಾಸನ ಶಿಕ್ಷಣ ಪಠ್ಯ ಪಠಣವಾಗಲಿ ಕನ್ನಡ ಕಲಿತವ ಹಿಡಿಯುತಾಗಲಿ ಅಧಿಕಾರ ದಂಡವ. ಸ್ವರಚನೆ. ಶ್ರೀಕಾಂತ ಹಾ ಬಾಲೆಹೊಸುರ ಸಾ. ತಂಗೊಡ ತಾ ಶಿರಹಟ್ಟಿ ಜಿ ಗದಗ ೯೯೦೧೨೭೫೪೭೭
Poetry Books 50% Off
Bestselling collections from top poets
