ಹೊನ್ನಶೂಲ
#ಹೊನ್ನಶೂಲ! ನಿರಿಹಿಡಿದು ನಡುವೇರಿ ಹೊರಟವನ ಭರವಸೆಯಿಲ್ಲದ ಬದುಕಿಗೆ ದಾರಿಹೋಕರೆಲ್ಲಾ ದಾರಿದೀಪ ಕಪ್ಪುಗಂಬಳಿ ಹೆಗಲೇರಿ ಬದುಕ ದಂಡಯಾತ್ರೆಗೆ ಹೊರಟ "ದಂಡಯಾತ್ರೆ ಖಾತ್ರಿಯೇ ಇಲ್ಲ" ಖಚಿತವಾದದ್ದು ಗತಿ ಮಾತ್ರ! ಹಠಾತ್ತನೆ ಎದೆಗುಂದಿ ಅಡ್ಡದಾರಿಗೆ ಬಿದ್ದ ಅಯ್ಯೋ, ಮಹತ್ವಾಕಾಂಕ್ಷೆ ಈಗೀಗ ಜೀವ ಹಿಂಡುವ ಶೂಲ ಛೇ! ಅಲ್ಲ ಅಲ್ಲ ಪಕ್ಕದ ಕಂಬ ಹಿಡಿದೇರಿ ದಾರಿ ಅಂಚಿನ ಕೋಣೆಯ ಕಟ್ಟೆಯನೇರಿ ಪದ್ಮಾಸನ ಹಾಕಿದ್ದು ಮಾತ್ರ ವಿಚಿತ್ರ. ಹಠಾತ್ತನೆ ಉದಯಿಸಿದ 'ಆತ್ಮ ' ಹುಳುವೊಂದು ಸರಸರ ಉಜ್ವಲಿಸಿದ 'ಜ್ಞಾನ' ಯಾವುದು? ಶೂನ್ಯವೋ? ಮಹತ್ವಾಕಾಂಕ್ಷೆಯೋ? ಬೆಳ್ಳಂಬೆಳಗಾದರೂ ಅಲ್ಲೇ ಅಲ್ಲಾಡದೇ ಸ್ಥಿರವಾಗಿದ್ದವನಿಗೆ ಮೊದ ಮೊದಲು 'ಕಂದು' ಕಂಡರೂ ಋಷಿಯ ಇಚ್ಛಾಶಕ್ತಿಯಂತೆ ಕಂದು ಹಸಿರಾಗಿ ಜೊತೆಗಿಷ್ಟು ಕಡುನೀಲಿಯೂ ಬೆರೆತಿತು ಹೆಣದಂತೆ ಗೂಡು ಸೇರಿದ ಧ್ಯಾನಮಗ್ನ ಕವಿ ಅಚಲವಾದ ಮಹಾನ್ ತಪಸ್ವಿ! ಆದರೂ ಶೂನ್ಯ ಮೈ ಬಡಿದಾಗ ಪ್ರಾಣದಲ್ಲೂ ಸಾವನ್ನು ನೋಡುವ ಅಜ್ಞಾತ!
Poetry Books 50% Off
Bestselling collections from top poets
