ಸಮಾನತೆ
ಉರಿವ ದೀಪದ ಎದುರು ಬೇಡಿ ಕುಳಿತರೆ ಬೆಳಕು ಹರಿಯ ಬೇಡಿದರೇನು ಫಲ ನೀನೆ ಹೇಳು. ಕಾಣದಿರೊ ಕಾರಣವ ಹುಡುಕುತಾ ಕೂತಿರುವೆ ನೀ ಕಾಣೋ ಮೊದ ಮೊದಲ ಮನುಜನಾಗಿ.!! ಹೂವೊಂದು ಅರಳುತಿರೆ ಪಯಣ ಗೊತ್ತಿಲ್ಲದೇ ತಾನೆಲ್ಲಿ ಸೇರುವನೆಂಬ ಬಯದ ನೆರಳಲ್ಲಿ. ಮಸಣಕೋ ಮದುವೆಗೋ ಒಂದೂ ತಿಳಿಯದು ಅದಕೆ ಕೊನೆಗಾಲ ಇರುವುದೂ ಒಂದೆ ದಿನಷ್ಟೆ!! ಅತ್ತಿಯಾ ಮರದಲಿ ಬಿತ್ತಿದಾ ಹಣ್ಣಿಹುದು ಓಳಿತಾವುದೂ ಒಂದೂ ಗೊತ್ತೆ ಇಲ್ಲ. ಬಿಚ್ಚಿದರೆ ಘಮವುಂಟು ಜೀವ ಜಂತುಗಳುಂಟು ಚಂದಾವಾಗಿರಬೇಕು ಮೇಲೆ ಜಗದೊಳಗೆ.!! ಮನುಜನೇ ಮನುಜನಿಗೆ ಮಾನವನು ಆಗಿರಲು ಸಮಾನತೆಯೊಂದು ಬೇಕಿದೆ ಒಳಗೆ. ನಾನುಂಟು ನೀನುಂಟು ಎಲ್ಲರೂ ಮನುಜರೇ ಜಾತಿಯ ಮಾತೆಕೆ ನಮ್ಮ ನಮ್ಮೊಳಗೇ..!! ದೀಪವೂ ಆರಿದರೆ ನಮ್ಮನೇ ನಿಮ್ಮನೇ ಎಲ್ಲೆಲ್ಲೂ ಕತ್ತಲು ಕವಿಯುವುದು ತಿಳಿದುಕೋ. ಹಚ್ಚುವಾ ದೀಪವಾ ಜೊತೆಗೂಡಿ ನಾವಿಂದು ಬೆಳಕಾ ಬೀರುವಾ ಜಗಕೆ ನಾವೇ ಒಂದೂ.!! ಎಲ್ಲೀ ಜಗದೊಳಗೆ ಇಲ್ಲದಿರೆ ನಮ್ಮಲ್ಲಿ ಇರುವುದೇಕಿದೆ ಹೇಳು ಮೇಲು ಕೀಳು ಭೀಮ ಬಸವ ಬುದ್ದ ಹೇಳಿಹುದೆ ಒಂದಷ್ಟೆ ವ್ಯಕ್ತಿ ಗೌರವ ಮುಖ್ಯ ನಮ್ಮ ನಮ್ಮೊಳಗೆ.!!!
Poetry Books 50% Off
Bestselling collections from top poets
