ಬೆಸ್ಟಿ
ನೀ ಮಗುತರ ಹಠಮಾರಿ ನೀ ಅರ್ಥವಾಗದ ನಿಘಂಟು ನೀ ಸ್ವಲ್ಪ ಅಲ್ಲವೇ ಅಲ್ಲ ಜಾಸ್ತಿ ಕೋಪಿಷ್ಟೆ ನಿನ್ನೊಳಗಿನ ಭಾವನೆಗಳ ಹಂಚಿಕೊಳ್ಳಲು ಇಚ್ಚಿಸದೆ ಬಚ್ಚಿಟ್ಟು ನಗುಮುಖದಿ ಕಾಣುವವಳು ನೀ ನಿನ್ನ ನೋವು ಅರ್ಥವೇ ಆಗುತ್ತಿಲ್ಲ ಎನಗೆ ಕ್ಷಮಿಸೆನ್ನ ಅತಿ ಮಾಡಿದ್ದರೇ ನಿದ್ದೆಗೆಂದು ಜಾರುವೆಯೆಂಬ ಊಹೆಯೂ ಇಲ್ಲದ ನೀ ಇಂದು ರಾತ್ರಿ ಪೂರ್ತಿ ನಿದ್ದೆ ಇಲ್ಲದೆ ಇರುವುದ ಕಂಡು ಆಶ್ಚರ್ಯವಾಗುತಿಹುದು ಕಾರಣವೇ ಇಲ್ಲವೆಂಬ ಸುಳ್ಳು ಹೇಳುತ್ತಿರುವೆಯೋ ಕೆಲವೊಮ್ಮೆ ಕಾರಣಗಳಿಗೆ ಲೆಕ್ಕವಿಲ್ಲದೇ ಹೇಳಲಾಗದೆ ಸುಮ್ಮನಾದೆಯೋ ನಾ ಅರಿಯೇ ಒಂದಂತೂ ನಿಜ ನೀ ನನ್ನ ನೆಚ್ಚಿನ ಸ್ನೇಹಿತೆ ಕಾರಣ ಗೊತ್ತಿಲ್ಲ ನಿನ್ನ ಕಳೆದುಕೊಳ್ಳುವ ಮನ ನನಗಿಲ್ಲ ಆದ ಕಾರಣ ನಿನ್ನ ಪೀಡಿಸುತ್ತಿಲ್ಲ...
Ad
Poetry Books 50% Off
Bestselling collections from top poets
Shop Now →
