ಹುಚ್ಚರಾ ಸಂತಿ
"ಹುಚ್ಚರಾ ಸಂತೆಯಿದು ಮೆಚ್ಚುವವರಾರೋ ಹುಚ್ಚೆದ್ದು ಕುಣಿತಾರೆ ಮೂರ್ಖ ಜನರು. ಬೀದಿಗೂ ಒಂದಂತೆ ಕೇರಿಗೂ ಒಂದಂತೆ ಮನೆಮನೆಗೂ ಒಂದೊಂದು ದೇವ್ರಂತೆ ಕಾಣಿರೋ.. ಕಡೇಕೇರಿ ದುರುಗವ್ವ ಕೆಳಗೇರಿ ಮಾರೆವ್ವ ಕೊನೆಕೇರಿಯಲಿ ಕಾದವ್ಳೆ ಕಾರದ ಚೌಡವ್ವ. ಕೆರೆ ಏರಿ ಮ್ಯಾಲೊಂದು ಮರದಲ್ಲಿ ಬೂತಪ್ಪ ಕಾರದ ಉರಿ ಏರಿ ಮೆರಿತಾನೆ ಅವ ಕೇಳ್ರಪ್ಪ. ಗಡಿಚೌಡಿ ಹೊಂಟಾಳ ಮಾರೀಯ ಹೊರಹಾಕಿ ಹಗ್ಗ ಕಸಬರಿಗೆ ಮರದಲ್ಲಿ ಉಡಿಯಕ್ಕಿ. ಬಾಳ ಬಡವಿ ಅವಳು ಕೂಗ್ಯಾರ ದೋ ಎಂದು ಉದೋ ಉದೋ ಎಂದಾಲ ಪಕ್ಕದಾ ಮನಿಯಾಕಿ ಹುಚ್ಚರಾ ಸಂತೈತಿ ಮೆಚ್ಚುವಾ ದೇವ್ರಿಲ್ಲ ಹುಚ್ಚೆದ್ದು ಕುಣಿತಾರೋ ಕೇರಿಯ ಜನರೂ. ಮಚ್ಚಿಡಿದು ಬಾರಯ್ಯ ಕೊಚ್ಚಾಕಿ ಹೋಗಯ್ಯ ಹುಚ್ಚೆದ್ದು ಕುಣಿವಾ ಈ ಜನರಾ ಹುಚ್ಚೆದ್ದು ಕುಣಿವಾ ಈ ಜನರಾ" -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
