ವಿಷವೃಕ್ಷ
24. ವಿಷವೃಕ್ಷ ನಾನು ನನ್ನವರ ಮೇಲೆ ಕೋಪಗೊಂಡೆ ನಾನು ಇತರರ ಮೇಲೆ ಕೋಪಗೊಂಡೆ ಆದರೆ ಕೋಪವೂ ಕಡಿಮೆಯಾಗಲಿಲ್ಲ ! ಮತ್ತೆ ಕೋಪವು ಹೆಚ್ಚಾಯ್ತು ಭಯದಿಂದ ಕೋಪವೆಂಬ ವಿಷವೃಕ್ಷಕ್ಕೆ ನೀರೆರೆದೆ ನನ್ನ ಹುಸಿನಗೆಯಲ್ಲಿ ಅದನ್ನು ಮರೆಮಾಚಲು ಪ್ರಯತ್ನಿಸಿದೆ ! ಮೃದುವಾದ ಕುತಂತ್ರಗಳೊಂದಿಗೆ ಇನ್ನೂ ಬೆಳೆಸಿದೆ ! ಅದು ರಾತ್ರಿ ಹಗಲೆಂಬ ಸಮಯದ ಪರಿವಿಲ್ಲದೆ ಇನ್ನೂ ಬೆಳೆಯಿತು ! ಈ ವಿಷವ್ರಕ್ಷಕ್ಕೆ ಬೆಳೆಯುವುದನ್ನು ಹೇಗೆ ತಡೆಯಲಿ ಎಂದು ಧ್ಯಾನಿಸಿದೆ ಪ್ರಶಾಂತ ಮನಸ್ಸು ಮತ್ತು ತಾಳ್ಮೆಯಿಂದ ಮಾತ್ರ ಇದರ ಸಾಧ್ಯತೆಯನ್ನು ಮನಗಾಣಿದೆ ಇದು ಹೀಗೆ ಬೆಳೆದರೆ ಜೀವನ ನರಕ ಎಂಬುದನ್ನು ಮನಗಾಣಿದೆ! - _ಶಹಾಬುದ್ದೀನ್_
Ad
Poetry Books 50% Off
Bestselling collections from top poets
Shop Now →
