ಸಂಕಲ್ಪ
ನಿನಗೆಂದೂ ಸುಳ್ಳ ನುಡಿಯಬಾರದೆಂಬ ಸಂಕಲ್ಪವಾ ನಾ ಮಾಡಿಹೆ ನಿನ್ನೊಂದಿಗೆ ವಿನಾಃಕಾರಣ ಜಗಳವಾಡಬರದೆಂಬ ದೃಢ ನಿರ್ಧಾರವ ಮಾಡಿಹೆ ನಿನ್ನ ಸ್ನೇಹವ ಎಂದೂ ಕಳೆದುಕೊಳ್ಳಬಾರದೆಂಬ ಆಶೋತ್ತರವ ನಾ ಹೊಂದಿಹೆ ನಿನ್ನ ಖುಷಿಯಲ್ಲಿ ಪಾಲಿರಲಿಲ್ಲವೆಂದರೂ ಪರವಾಗಿಲ್ಲ ನಿನ್ನ ದುಃಖಕ್ಕೆ ನಾ ಕಾರಣವಾಗಬಾರದೆಂಬ ಮನಸ್ಸಿಗೆ ಸದಾ ಹೇಳಿಹೆ ಪಡೆದುಕೊಂಡ ನಂತರ ಕಳೆದುಕೊಳ್ಳುವೆನೆಂಬ ಭಯದಲ್ಲಿ ನಾ ಜೀವಿಸುತ್ತಿರುವೆ
Ad
Poetry Books 50% Off
Bestselling collections from top poets
Shop Now →
