ಹತ್ತಿರ
ಹೃದಯಕ್ಕೆ ಹತ್ತಿರವಾದವರ ಹಾವ ಭಾವವೇ ಸಾಕು ಅವರ ಮನಃಸ್ಥಿತಿಯ ಅರಿಯಲು... ಕಣ್ಣಿನ ಆ ಒಂದು ನೋಟ ಸಾಕು ಅವರ ಖುಷಿ ದುಃಖದ ಲೆಕ್ಕಚಾರ ಮಾಡಲು... ಅಪಾರ ನೋವು ಮನದಲ್ಲಿದ್ದರೂ ನಮಗೆ ಎಲ್ಲಿ ಬೇಜಾರಾಗುತ್ತದೆಯೋ ಎಂದು ನಗುವ ಆ ಜೀವ ಕಳೆದುಕೊಳ್ಳುವ ಮನ ನನಗಿಲ್ಲ... ನೀ ಅಳುವಾಗ ನನ್ನ ಕಣ್ಣು ತುಂಬಿದ್ದು ಇದೇ ಮೊದಲು ಕಾರಣ ನಾ ಎಂದೂ ಕಂಡಿರಲಿಲ್ಲ ಗೆಳತಿ ನೀ ಅತ್ತಿದ್ದು... ನಿನ್ನ ಸಮಸ್ಯೆಗೆ ಪರಿಹಾರ ಹುಡುಕುವುದರಲಿ ವಿಫಲನಾದೇ ಎಂಬ ಬೇಜಾರು ನನ್ನನ್ನು ಕಾಡುತ್ತಿದೆ ಗೆಳತಿ.. ನಿನ್ನ ಕಷ್ಟಗಳೆಲ್ಲ ಬೇಗ ಬಗೆಹರಿಯಲಿ ಎಂದು ದೇವರಲಿ ಬೇಡುವುದ ಹೊರೆತು ಬೇರೆ ಏನನ್ನೂ ನಾ ಮಾಡಲಾಗುತ್ತಿಲ್ಲ
Ad
Poetry Books 50% Off
Bestselling collections from top poets
Shop Now →
